ಸಮಾಜಸೇವಕ ಗಣಪತಿ ಟಿ.ಶ್ರೀಯಾನ್ ಸನ್ಮಾನ

gana
Published on

ಕೋಟ: ಎಂಟು ದಿನದ ನಾಟಕಾಷ್ಟಕ ಭಿನ್ನವಾಗಿ ರಂಗದಲ್ಲಿ ಕಂಡವು. ವೃತ್ತಿಪರ ಕಲಾವಿದರನ್ನು ಮೀರಿಸುವ ರಂಗ ಪ್ರಸ್ತುತಿ ಕೆಲವು ಮಕ್ಕಳ ರಂಗಭೂಮಿಯ ನಾಟಕಗಳಾದವು. ತೆಕ್ಕಟ್ಟೆ ಭಾಗದಲ್ಲಿ ರಂಗಭೂಮಿಯ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡ ಹೆಗ್ಗಳಿಕೆ ಸಂಸ್ಥೆಯದು ಎಂದು ಬಸ್ರೂರು ಶಾರದಾ ಕಾಲೇಜು ಉಪನ್ಯಾಸಕ ರಾಘವೇಂದ್ರ ಶೆಟ್ಟಿ ಹೇಳಿದರು.

ತೆಕ್ಕಟ್ಟೆ ಹಯಗ್ರೀವದಲ್ಲಿ ಕೊಮೆ ತೆಕ್ಕಟ್ಟೆ ಯಶಸ್ವಿ ಕಲಾವೃಂದ, ಕೋಟ ರಂಗಸಂಪದ, ತೆಕ್ಕಟ್ಟೆ ಧಮನಿ ಟ್ರಸ್ಟ್ ಆಶ್ರಯದಲ್ಲಿ ನಾಟಕಾಷ್ಟಕ ಕಾರ್ಯಕ್ರಮದ 7ನೇ ದಿನದಲ್ಲಿ ಸಮಾಜಸೇವಕ ಗಣಪತಿ ಟಿ.ಶ್ರೀಯಾನ್ ಅವರನ್ನು ಗೌರವಿಸಿ ಮಾತನಾಡಿದರು.

ಎಸ್‌ಎಂಎಸ್ ಕಾಲೇಜು ಪ್ರಾಂಶುಪಾಲ ಅಭಿಲಾಷ ಸೋಮಯಾಜಿ, ರಂಗ ನಿರ್ದೇಶಕ ರೋಹಿತ್ ಎಸ್.ಬೈಕಾಡಿ, ಉದ್ಯಮಿ ಗೋಪಾಲ ಪೂಜಾರಿ, ಗಣೇಶ್ ಕೊಮೆ, ಸಾತ್ಯಕಿ ಪಂಜಿಗಾರು, ರಾಹುಲ್ ಅಮೀನ್ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net