ಜಾಗೃತ ಯುವಶಕ್ತಿಯಿಂದ ಸಾಮಾಜಿಕ ಕಾರ್ಯ

yuva sambhrama
ಮಾತೃಭೂಮಿ ಯುವ ಸಂಘಟನೆ ವಾರ್ಷಿಕೋತ್ಸವ ಯುವ ಸಂಭ್ರಮ-2025 ಕಾರ್ಯಕ್ರಮವನ್ನು ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಉದ್ಘಾಟಿಸಿದರು.
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಜಾಗೃತಿಗೊಂಡಿರುವ ಯುವಶಕ್ತಿಯಿಂದ ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ. ಇದು ಭವಿಷ್ಯದ ಸಮಾಜ ನಿರ್ಮಾಣಕ್ಕೆ ಬುನಾದಿಯಾಗಲಿದೆ ಎಂದು ಎಂ.ಎಸ್.ಮಂಜ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಹೇಳಿದರು.

ವಂಡ್ಸೆ ಆತ್ರಾಡಿಯ ಕಂಬಳಗದ್ದೆ ವಠಾರದಲ್ಲಿ ಇತ್ತೀಚೆಗೆ ಮಾತೃಭೂಮಿ ಯುವ ಸಂಘಟನೆಯ 8ನೇ ವಾರ್ಷಿಕೋತ್ಸವ ಯುವ ಸಂಭ್ರಮ-2025 ಉದ್ಘಾಟಿಸಿ ಮಾತನಾಡಿದರು.

ಮಾತೃಭೂಮಿ ಯುವ ಸಂಘಟನೆ ಅಧ್ಯಕ್ಷ ಶಶಿಧರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು ಕೈಗಾರಿಕೋದ್ಯಮಿ ಎನ್.ರಮೇಶ ದೇವಾಡಿಗ ಅವರನ್ನು ಸನ್ಮಾನಿಸಿದರು. ಉದ್ಯಮಿ ಬಿ.ಎಂ.ಬಾಳಿಕೆರೆ ಶೈಕ್ಷಣಿಕ ಸಾಧಕರಾದ ಆಯುಷ್ ಕಲ್ಮಡಿ, ರೋಹಿತ್ ಬಳಗೇರಿ, ರಕ್ಷಿತಾ ಅಡಿಕೆಕೊಡ್ಲು ಅವರಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿದರು. ವಂಡ್ಸೆ ಗ್ರಾ.ಪಂ. ಅಧ್ಯಕ್ಷೆ ಗೀತಾ ಅವಿನಾಶ್ ಬಹುಮಾನ ವಿತರಿಸಿದರು.

ಶಾಸಕ ಗುರುರಾಜ್ ಗಂಟಿಹೊಳೆ, ತಾ.ಪಂ. ಮಾಜಿ ಸದಸ್ಯ ಉದಯ ಜಿ.ಪೂಜಾರಿ, ಪ್ರಮುಖರಾದ ಚಂದ್ರಯ್ಯ ಆಚಾರ್ಯ ಕಳಿ, ಪ್ರದೀಪ ಕುಮಾರ್ ಶೆಟ್ಟಿ, ಕೆ.ಮಂಜುನಾಥ ಶೆಟ್ಟಿ ನಂದ್ರೋಳ್ಳಿ, ಶಶಿಧರ ಶೆಟ್ಟಿ ಕೊರಾಡಿಮನೆ, ಡಾ.ಕುಸುಮಾಕರ ಶೆಟ್ಟಿ, ಜಯರಾಮ ಶೆಟ್ಟಿ ಬೆಳ್ವಾಣ, ಗಣೇಶ ಶೆಟ್ಟಿ ಕೆರಾಡಿ, ಶ್ರೀಧರ ಆಚಾರ್ಯ ಆಲೂರು, ಶ್ರೀನಿವಾಸ ಪೂಜಾರಿ, ವಿನಂತ ಗಾಣಿಗ ಉಪಸ್ಥಿತರಿದ್ದರು.

ಸಂದೇಶ ಶೆಟ್ಟಿ ಅಡಿಕೆಕೊಡ್ಲು ಸ್ವಾಗತಿಸಿದರು. ಗಣೇಶ ದೇವಾಡಿಗ ವರದಿ ಮಂಡಿಸಿದರು. ಶಂಕರ ಆಚಾರ್ಯ ಆತ್ರಾಡಿ ವಂದಿಸಿದರು. ಪತ್ರಕರ್ತ ಪ್ರಭಾಕರ ಆಚಾರ್ಯ ಚಿತ್ತೂರು ಕಾರ್ಯಕ್ರಮ ನಿರ್ವಹಿಸಿದರು. ಪ್ರಸಾದ್ ಆಚಾರ್ಯ, ಧರ್ಮ ಗುಂದಿನಮನೆ, ವಿಠಲ ಆಚಾರ್ಯ, ಉದಯ ಅಂಗಡಿಮನೆ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net