ಕಾಡೂರು ಗ್ರಾಮ ಪಂಚಾಯಿತಿಗೆ ಪ್ರಶಸ್ತಿ ಗರಿ

kon
Published on

ಕೊಕ್ಕರ್ಣೆ: ಉಡುಪಿ ಜಿಲ್ಲಾ ವ್ಯಾಪ್ತಿಯ ಗ್ರಾಪಂ ಸರ್ವೋತ್ತಮ ಸಾಧನೆಗೆ ಜಿಪಂ ರಾಷ್ಟ್ರಮಟ್ಟದಲ್ಲಿ ನಾನಾಜೀ ದೇಶ್‌ಮುಖ್ ಸರ್ವೋತ್ತಮ ಪಂಚಾಯಿತಿ ಸತತ ವಿಕಾಸ್ ಪುರಸ್ಕಾರದಡಿ ತೃತೀಯ ಸ್ಥಾನಗಳಿಸಿ ಎರಡು ಕೋಟಿ ರೂ. ನಗದು ಬಹುಮಾನ ಗಳಿಸಿದ್ದು, ಕಾಡೂರು ಪಂಚಾಯಿತಿ ಸುಸ್ಥಿರ ಅಭಿವೃದ್ಧಿ ಪ್ರಶಸ್ತಿ ವರ್ಗದಲ್ಲಿ ಆರೋಗ್ಯಕರ ಪಂಚಾಯಿತಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಏಳು ಲಕ್ಷ, ಸಾಕಷ್ಟು ನೀರು ಹೊಂದಿರುವ ಪಂಚಾಯಿತಿ ವರ್ಗದಲ್ಲಿ ದ್ವಿತೀಯ ಸ್ಥಾನ ಪಡೆದು ಏಳು ಲಕ್ಷ ಮತ್ತು ಮಹಿಳಾ ಸ್ನೇಹಿ ಪಂಚಾಯಿತಿ ವಿಭಾಗದಲ್ಲಿ ಐದು ಲಕ್ಷ ನಗದು ಪುರಸ್ಕಾರ ಪಡೆದಿದೆ.

ಹೊಂಬೆಳಕು 2025 ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಶಸ್ತಿಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಉಡುಪಿ ಜಿಪಂ ಸಿಇಒ ಪ್ರತೀಕ್ ಬಾಯಲ್ ಅವರು ಕಾಡೂರು ಪಿಡಿಒ ಮಹೇಶ್ ಕೆ., ಅಧ್ಯಕ್ಷ ಜಲಂಧರ್ ಶೆಟ್ಟಿ, ಮಾಜಿ ಅಧ್ಯಕ್ಷ ಪಾಂಡುರಂಗ ಶೆಟ್ಟಿ, ಸದಸ್ಯರಿಗೆ ಹಸ್ತಾಂತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net