ಸಂಸ್ಕಾರವಂತ ನಾಗರಿಕರಿಂದ ದೇಶ ಸುಭದ್ರ

gan
Published on

ಗಂಗೊಳ್ಳಿ: ಸನಾತನ ಹಿಂದು ಧರ್ಮಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ಸಂಸ್ಕಾರಯುತ ನಾಗರಿಕರು ದೇಶ ಮತ್ತು ಧರ್ಮ ರಕ್ಷಿಸಬಲ್ಲರು ಎಂದು ಸುರತ್ಕಲ್‌ನ ಶ್ರೀನಿವಾಸ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರಚಿಕಿತ್ಸಾ ವಿಭಾಗ ಪ್ರಾಧ್ಯಾಪಕ ಡಾ.ವಿನಾಯಕ ಶೆಣೈ ಹೇಳಿದರು.

ಗಂಗೊಳ್ಳಿಯ ಶ್ರೀ ವೀರ ವಿಠಲ ಸಭಾಭವನದಲ್ಲಿ ಶನಿವಾರ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ 38ನೇ ವಾರ್ಷಿಕೋತ್ಸವದಲ್ಲಿ ಬೌದ್ಧಿಕ್ ನೀಡಿ, ಮೌಲ್ಯಾಧಾರಿತ ಶಿಕ್ಷಣ ಶಿಶು ಮಂದಿರದಲ್ಲಿ ದೊರೆಯುತ್ತದೆ. ಶಿಶು ಮಂದಿರಕ್ಕೆ ಬಂದಂತಹ ಮಕ್ಕಳು ದೇಶದ ಭವಿಷ್ಯದ ಶಕ್ತಿಯುತ ಪ್ರಜೆಗಳಾಗಲಿದ್ದಾರೆ ಎಂದರು.

ಪರ್ಸಿನ್ ಮೀನುಗಾರರ ಸೇವಾ ಸಹಕಾರಿ ಸಂಘದ ನಿರ್ದೇಶಕ ರಾಘವೇಂದ್ರ ವಿ.ಮೇಸ್ತ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿ ಸಂಗೀತಾ ಆರ್.ಮೇಸ್ತ ಬಹುಮಾನ ವಿತರಿಸಿದರು.

ಶಿಶು ಮಂದಿರದ ಅಧ್ಯಕ್ಷ ಬಿ.ರಾಘವೇಂದ್ರ ಪೈ ಸ್ವಾಗತಿಸಿದರು. ಸಂಚಾಲಕ ಡಾ.ಕಾಶೀನಾಥ ಪೈ ಪ್ರಸ್ತಾವನೆಗೈದರು. ಗಾಯತ್ರಿ ಕೊಡಂಚ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ವಿಜಯಶ್ರೀ ವಿ.ಆಚಾರ್ಯ, ವಸಂತಿ ಖಾರ್ವಿ, ಮಾತಾಜಿ ರತ್ನಾ ಅತಿಥಿಗಳನ್ನು ಗೌರವಿಸಿದರು. ಸವಿತಾ ಯು.ದೇವಾಡಿಗ ವಂದಿಸಿದರು. ಬಿ.ಲಕ್ಷ್ಮೀಕಾಂತ ಮಡಿವಾಳ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net