ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನಿಂದ ಸಮಾಜಮುಖಿ ಕಾರ್ಯ

ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನಿಂದ ಸಮಾಜಮುಖಿ ಕಾರ್ಯ
Published on

ಹಾಸನ: ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಇರುವುದೇ ಸಮುದಾಯದ ಸೇವೆಗಾಗಿ. ಜಗತ್ತಿನ ನೂರಾರು ದೇಶಗಳಲ್ಲಿ ಸಾಮಾಜಿಕ ಸೇವೆಯಲ್ಲಿ ನಿರಂತರವಾಗಿ ಸಂಸ್ಥೆ ತೊಡಗಿಸಿಕೊಂಡು ಜನಮುಖಿ ಕಾರ್ಯವನ್ನು ಮಾಡುತ್ತಿದೆ ಎಂದು ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ರಾಜ್ಯ ಸಹ ಕಾರ್ಯದರ್ಶಿ ಎಲ್.ಟಿ.ಲೋಕೇಶ್ ತಿಳಿಸಿದರು.

ನಗರದ ಜೈನ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಸೇವಾ ಶಿಬಿರದಲ್ಲಿ ಮಾತನಾಡಿ, ಹಾಸನಾಂಬ ದೇವಿ ದರ್ಶನ ಸಂಬಂಧ ಎರಡು ಪಾಳೆಯದಂತೆ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮಕ್ಕಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರತಿ ಸಾಲಿನ ಶಿಸ್ತನ್ನು ಕಾಪಾಡುವುದು, ಬಾಯಾರಿದವರಿಗೆ ನೀರಿನ ಪೂರೈಕೆ ಮಾಡುವುದು, ವಯೋವೃದ್ಧರನ್ನು ವ್ಹೀಲ್ ಚೇರಿನಲ್ಲಿ ಕರೆದುಕೊಂಡು ಹೋಗಿ ದರ್ಶನ ಮಾಡಿಸುವುದು, ಸ್ವಚ್ಛತಾ ಕಾರ್ಯ ಮಾಡುವುದು ಹೀಗೆ ಅನೇಕ ಕಡೆಗಳಲ್ಲಿ ಸೇವಾ ನಿರತರಾಗಿದ್ದಾರೆ. ಸಿಕ್ಕ ಅವಕಾಶವನ್ನು ಶ್ರದ್ಧೆಯಿಂದ ನಿರ್ವಹಿಸಿ ನಮ್ಮ ಸಂಸ್ಥೆ ಹಾಗೂ ಜಿಲ್ಲಾಡಳಿತಕ್ಕೆ ಕೀರ್ತಿ ತರಬೇಕಿದೆ ಎಂದರು.

ರೋವರ್ ರೇಂಜರ್ ವಿಭಾಗದ ಹೆಡ್ ಕ್ವಾರ್ಟರ್ ಕಮಿಷನರ್ ಡಾ.ಜಿ.ಡಿ.ನಾರಾಯಣ, ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಎಚ್.ಎಂ.ಪ್ರಿಯಾಂಕಾ, ಬೆಂಗಳೂರು ಎಎಸ್‌ಒಸಿ ನಿತಿನ್ ಅಮೀನ್, ಜಿಲ್ಲಾ ಖಜಾಂಚಿ ಆರ್.ಎಸ್.ರಮೇಶ್, ಏಕಲವ್ಯ ರೋವರ್ ನಾಯಕ ಆರ್.ಜಿ.ಗಿರೀಶ್ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು, ವಿವಿಧ ತಾಲೂಕು ಕಾರ್ಯದರ್ಶಿಗಳು, ವಿವಿಧ ಜಿಲ್ಲೆಯಿಂದ ಆಗಮಿಸಿದ್ದ ರೋವರ್ ಲೀಡರ್, ರೇಂಜರ್ ಲೀಡರ್ಸ್‌, ಕಾರ್ಯನಿರತ ರೋವರ್ಸ್‌, ರೇಂಜರ್ಸ್‌ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net