ಪ್ರಾಮಾಣಿಕತೆ ಮೆರೆದ ಸಮಾಜ ಸೇವಕ

New Project (3)
Published on

ಉಪ್ಪಿನಂಗಡಿ: ರಸ್ತೆ ಬದಿಯಲ್ಲಿ ಬಿದ್ದು ಸಿಕ್ಕಿದ ಅಮೂಲ್ಯ ದಾಖಲೆ ಪತ್ರ, ನಗದು ಹಣ ತುಂಬಿದ್ದ ಚೀಲವನ್ನು ವಾರಸುದಾರರಿಗೆ ಹಿಂತಿರುಗಿಸುವ ಮೂಲಕ ಸಾಮಾಜಿಕ ಮುಂದಾಳು ರಾಮಚಂದ್ರ ಮಣಿಯಾಣಿ ಪ್ರಾಮಾಣಿಕತೆ ಮೆರೆದಿದ್ದಾರೆ.

ರಾಮಕುಂಜ ಗ್ರಾಮದ ನೆಬಿಸಾ ತನ್ನ ಮನೆಯ ಮೂಲ ದಾಖಲೆ, ನಗದು ತುಂಬಿದ ಚೀಲ ಕಳೆದುಕೊಂಡಿದ್ದರು. ಈ ಚೀಲದಲ್ಲಿ ಅರ್ಜಿಯೊಂದರಲ್ಲಿ ಬರೆದಿದ್ದ ಮೊಬೈಲ್ ಸಂಖ್ಯೆಯನ್ನು ಬಳಸಿ ಸಂಪರ್ಕಿಸಿದಾಗ ನೆಬಿಸಾ ಅವರು ದಾಖಲೆಗಳನ್ನು ಕಳೆದುಕೊಂಡು ಕಂಗಾಲಾಗಿದ್ದರು. ಕೂಡಲೇ ಮಕ್ಕಳನ್ನು ಉಪ್ಪಿನಂಗಡಿಗೆ ಕಳುಹಿಸಿ ರಾಮಚಂದ್ರ ಮಣಿಯಾಣಿ ಅವರಿಂದ ನಗದು ಸಹಿತ ದಾಖಲೆ ಸ್ವೀಕರಿಸಿ ಧನ್ಯವಾದ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net