

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆಯ ಕಡಬ ತಾಲೂಕು ಗೋಳಿತೊಟ್ಟು ವಲಯದ ಹಳೆನೇರೆಂಕಿ ಜ್ಞಾನವಿಕಾಸ ಮಹಿಳಾ ಕೇಂದ್ರ, ಲಯನ್ಸ್ ಕ್ಲಬ್ ದುರ್ಗಾಂಬಾ ಅಲಂಕಾರು, ಹಳೆನೇರಿಂಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಹಿರಿಯ ವಿದ್ಯಾರ್ಥಿ ಸಂ, ಹಳೆನೇರಂಕಿ ಗ್ರಾಮ ವಿಕಾಸ ಸಮಿತಿ ಆಶ್ರಯದಲ್ಲಿ ಸುಳ್ಯ ಕೆವಿಜಿ ಮಹಾ ವಿದ್ಯಾಲಯ ಆಸ್ಪತ್ರೆಯ ಸಹಯೋಗದಲ್ಲಿ ದಂತ ಉಚಿತ ಚಿಕಿತ್ಸಾ ಶಿಬಿರವು ಹಳೆನೇರಿಂಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಇತ್ತೀಚೆಗೆ ನಡೆಯಿತು.
ಮುಖ್ಯ ಶಿಕ್ಷಕ ಸಾಂತಪ್ಪ ಗೌಡ ಉದ್ಘಾಟಿಸಿದರು. ಲಯನ್ಸ್ ಕ್ಲಬ್‌ನ ಪ್ರಮುಖರಾದ ನಿತ್ಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನಾ, ಹಿರಿಯ ವಿದ್ಯಾರ್ಥಿ ಸಂದ ಅಧ್ಯಕ್ಷ ಜನಾರ್ದನ, ಎಸ್.ಡಿ.ಎಂ.ಸಿ. ಅಧ್ಯಕ್ಷ ಹೊನ್ನಪ್ಪ ಗೌಡ, ಗ್ರಾಮ ಸಮಿತಿ ಅಧ್ಯಕ್ಷ ಪುರುಷೋತ್ತಮ, ಕೆವಿಜಿ ಆಸ್ಪತ್ರೆಯ ವೈದ್ಯ ತುಫೈಲ, ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷೆ ಸವಿತಾ ಶುಭ ಹಾರೈಸಿದರು. ಹಳೇನೇರೆಂಕಿ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಜಯಶ್ರೀ, ವಲಯದ ಸೇವಾ ಪ್ರತಿನಿಧಿಗಳಾದ ಹೇಮಲತಾ, ಪ್ರತಿವಾ, ಪ್ರೇಮಲತಾ, ಸುಮಲತಾ, ವಿಶಾಲಾಕ್ಷಿ ಉಪಸ್ಥಿತರಿದ್ದರು.
ಹೊಸದಾಗಿ ರಚನೆಯಾಗಿರುವ ಜ್ಞಾನ ವಿಕಾಸ ಕೇಂದ್ರದ ದಾಖಲಾತಿಯನ್ನು ನಿಕಟಪೂರ್ವ ವಲಯಾಧ್ಯಕ್ಷ ವೀರೇಂದ್ರ ಅವರು ಸಂಯೋಜಕಿ ಪುಷ್ಪಲತಾ ಅವರಿಗೆ ಹಸ್ತಾಂತರಿಸಿದರು.
ಆಸ್ಪತ್ರೆಯ ಸಿಬ್ಬಂದಿ ಜಯಂತ್ ಪ್ರಸ್ತಾವಿಸಿದರು. ಹಿರಿಯ ವಿದ್ಯಾರ್ಥಿ ಸಂದ ಪ್ರಮುಖರಾದ ಮಹೇಶ್ ಸ್ವಾಗತಿಸಿದರು. ಗೋಳಿತೊಟ್ಟು ವಲಯದ ನಿಕಟಪೂರ್ವ ವಲಯ ಅಧ್ಯಕ್ಷ ವೀರೇಂದ್ರ ವಂದಿಸಿದರು. ಯೋಜನೆಯ ವಲಯ ಮೇಲ್ವಿಚಾರಕಿ ಜಯಶ್ರೀ ನಿರೂಪಿಸಿದರು.