ಸಮಾಜದ ಸಮಸ್ಯೆ ವಿರುದ್ಧ ಹೋರಾಟ ಅವಶ್ಯಕ

3blh1 court
Published on

ಬೆಲಹೊಂಗಲ: ಸಮಾಜದ ಕೆಟ್ಟ ಪದ್ಧತಿ, ಸಮಸ್ಯೆಗಳ ವಿರುದ್ಧ ನ್ಯಾಯಾಧೀಶರು ಮತ್ತು ವಕೀಲರು ಜತೆಯಾಗಿ ಹೋರಾಡಿದಾಗ ಸಮಾಜ ಸುಧಾರಣೆ ಆಗುತ್ತದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ರವಿ ಚವ್ಹಾಣ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಧಾನ ದಿವಾಣಿ ನ್ಯಾಯಾಲಯಕ್ಕೆ ದಾಂಡೇಲಿ ನ್ಯಾಯಾಲಯದಿಂದ ವರ್ಗಾವಣೆಗೊಂಡು ಬಂದಿರುವ ನ್ಯಾಯಾಧೀಶರಾದ ರೋಹಿಣಿ ಬಸಾಪುರ, ಹೆಚ್ಚುವರಿ ದಿವಾಣಿ ನ್ಯಾಯಾಲಯಕ್ಕೆ ವರ್ಗಾವಣೆಯಾದ ನ್ಯಾಯಾಧೀಶ ಬಸವರಾಜ ನಾಯಕ, ಅಪರ ಸರ್ಕಾರಿ ವಕೀಲರಾಗಿ ನೇಮಕವಾದ ರಮೇಶ ಕೋಲಕಾರ ಅವರ ಸ್ವಾಗತ ಕಾರ್ಯಕ್ರಮದ ಅಧ್ಯತೆ ವಹಿಸಿ ಮಾತನಾಡಿ, ಸಮಾಜ ಉತ್ತಮ ರೀತಿಯಾಗಿ ಬೆಳವಣಿಗೆಯಾದರೆ, ದೇಶ ಪ್ರಗತಿಗೊಂಡು ಶಾಂತಿ, ಸುವ್ಯವಸ್ಥೆ ನೆಲೆಗೊಳ್ಳಲಿದೆ ಎಂದರು.

ನ್ಯಾಯವಾದಿಗಳ ಸಂದ ಅಧ್ಯ ಎಂ. ಆರ್​.ಮೆಳವಂಕಿ ಮಾತನಾಡಿ, ಜನರಿಗೆ ನ್ಯಾಯದಾನ ನೀಡುವಲ್ಲಿ ವಕೀಲರು ಮತ್ತು ನ್ಯಾಯಾಧೀಶರ ಸಂಬಂಧ ಮುಖ್ಯವಾದುದು. ನೂತನ ನ್ಯಾಯಾಧೀಶರಿಗೆ ಅಗತ್ಯ ಸಹಕಾರ ನೀಡುವುದು ನಮ್ಮ ಕರ್ತವ್ಯ ಎಂದರು.

ಎಸ್​ಎಸ್​ಎಲ್​ಸಿ ಪರೀೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ತಾಲೂಕಿನ ದೇವಲಾಪುರ ಗ್ರಾಮದ ರೂಪಾ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ನ್ಯಾಯವಾದಿಗಳ ಸಂದ ಉಪಾಧ್ಯ ಎ.ಎಂ ಶಿದ್ರಾಮನಿ, ಪ್ರಧಾನ ಕಾರ್ಯದರ್ಶಿ ವಿ. ಜಿ. ಕಟದಾಳ ಹಾಗೂ ಹಿರಿಯ ವಕೀಲರು, ಸಂದ ಸದಸ್ಯರು, ನ್ಯಾಯಾಲಯದ ಸಿಬ್ಬಂದಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net