

ವಿಜಯವಾಣಿ ಸುದ್ದಿಜಾಲ ಬೈಂದೂರು
ಉಪ್ಪುಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ 1999-2000ನೇ ಎಸ್‌ಎಸ್‌ಎಲ್‌ಸಿ ಬ್ಯಾಚಿನ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ, ಗುರುವಂದನೆ, ಶಾಲೆಗೆ ಕೊಡುಗೆಗಳ ಹಸ್ತಾಂತರ ಹಾಗೂ ವಿದ್ಯಾರ್ಥಿ ಜೀವನದ ವಿಶೇಷ ಸನ್ನಿವೇಶಗಳ ಮರುಸೃಷ್ಟಿ ಕಾರ್ಯಕ್ರಮ ಭಾನುವಾರ ಕಾಲೇಜು ಆವರಣದಲ್ಲಿ ನಡೆಯಿತು.
ಕಾಲೇಜಿಗೆ ಕೊಡುಗೆಗಳನ್ನು ಹತ್ತಾಂತರಿಸಿದ ಶಾಸಕ ಗುರುರಾಜ ಗಂಟಿಹೊಳೆ ತಮಗೆ ವಿದ್ಯೆ ಕಲಿಸಿದ ಗುರುಗಳೊಂದಿಗೆ ಕೆಲಹೊತ್ತು ಕಳೆದರು.
25 ವರ್ಷಗಳ ಹಿಂದೆ ಈ ಬ್ಯಾಕ್‌ಗೆ ಪಾಠ ವಾಡಿದ್ದ ಪ್ರಭಾಕರ್ ಎನ್.ಹೆಗಡೆ, ಜಯರಾಮ ಶೆಟ್ಟಿ, ನಾಗಯ್ಯ ವಾಸ್ಟರ್, ವೆಂಕಟರಮಣ ಶೇರುಗಾರ್, ಶ್ರೀಧರ್ ಭಟ್ ಮೊಗೇರಿ, ಭಾಸ್ಕರ್ ಮಯ್ಯ, ಸರೋಜಿನಿ ನಾಯ್ಕ, ಸತ್ಯನಾರಾಯಣ, ನಾಗರಾಜ ಎಸ್., ಸವಿತಾ ಮಯ್ಯ ಹಾಗೂ ಅಂದು ಕ್ಲರ್ಕ್ ಆಗಿದ್ದ ಗೋವಿಂದ ಗಾಣಿಗರನ್ನು ಸನ್ಮಾನಿಸಿ ಗುರುವಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಹೈಸ್ಕೂಲ್ ವಿಭಾಗಕ್ಕೆ 1 ಲಕ್ಷ ರೂ. ಮೌಲ್ಯದ ಕಂಪ್ಯೂಟರ್ ಇನ್ವರ್ಟರ್ ಮತ್ತು ಮಿನಿ ಜೆರಾಕ್ಸ್ ಮಿಷಿನ್ ಕೊಡುಗೆಯಾಗಿ ನೀಡಲಾಯಿತು. ಪ್ರಸ್ತುತ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಗೌರವಿಸಲಾಯಿತು.
ಹಿರಿಯ ವಿದ್ಯಾರ್ಥಿ ಓಂಗಣೇಶ್ ಉಪ್ಪುಂದ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಎಸ್. ಸುರೇಶ್ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷ ಮೋಹನ್‌ಚಂದ್ರ, ಹಳೇ ವಿದ್ಯಾರ್ಥಿ ಸಂ ಅಧ್ಯಕ್ಷ ನವೀನ್‌ಚಂದ್ರ, ಎಸ್‌ಡಿಎಂಸಿ ಅಧ್ಯಕ್ಷ ಶ್ರೀಧರ್ ಗಾಣಿಗ, ಉಪ ಪ್ರಾಂಶುಪಾಲ ಚಂದ್ರಹಾಸ ಗೌಡ ಮತ್ತಿತರರು ಉಪಸ್ಥಿತರಿದ್ದರು.