

ವಿಜಯವಾಣಿ ಸುದ್ದಿಜಾಲ ಬೈಂದೂರು
ಪ್ರಚಾರಕ್ಕಾಗಲೀ ವ್ಯವಹಾರದ ದೃಷ್ಟಿಯಿಂದಾಗಲೀ ಅಥವಾ ಇತರರು ಗುರುತಿಸಿ ಗೌರವಿಸಬೇಕೆಂಬ ಉದ್ದೇಶವಿಟ್ಟು ಮತ್ತು ಅಪಾತ್ರರಿಗೆ ಮಾಡಿದ ದಾನ ಶ್ರೇಷ್ಠವೆನಿಸದು. ಇದು ಕೇವಲ ಕಾಟಾಚಾರಕ್ಕಾಗಿ ವಾತ್ರ ಸೀಮಿತವಾಗಿದ್ದು, ಏನೂ ಲಾಭವಾಗದು ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.
ಉಪ್ಪುಂದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಶನಿವಾರ ಸಂಜೆ ನಡೆದ ಧಾರ್ಮಿಕ ಸಮಾರಂಭದಲ್ಲಿ ನೂತನ ಶ್ರೀ ವಿದ್ಯಾಧಿರಾಜ ಸಭಾಗೃಹ ಹಾಗೂ ಇತರೆ ಕಟ್ಟಡ ನಿರ್ವಾಣಕ್ಕೆ ಆರ್ಥಿಕ ಸಹಕಾರ ನೀಡಿದ ದಾನಿಗಳನ್ನು ಅಭಿನಂದಿಸಿ ಮಾತನಾಡಿದರು.
ಹಿಂದು ಪರಂಪರೆಯಲ್ಲಿ ದಾನ, ಧರ್ಮಗಳ ಮೂಲಕ ಸತ್ಕರ್ಮಗಳನ್ನು ವಾಡಬೇಕು ಎಂಬ ನಿಯಮವಿದೆ. ಅದು ಶಾರೀರಿಕವಾಗಿ, ಮಾನಸಿಕವಾಗಿ ಮತ್ತು ಆರ್ಥಿಕವಾಗಿಯೂ ಕೂಡ ಮಾಡಬಹುದಾಗಿದೆ. ಇಂದಿನ ಕಾಲಟ್ಟದಲ್ಲಿ ಈ ರೀತಿ ಗುಪ್ತವಾಗಿ ದಾನ ಮಾಡುವವರ ಸಂಖ್ಯೆ ಬಹಳ ವಿರಳ. ದೇವರಿಗೆ ಯಾವುದೇ ಅಪೇಕ್ಷೆ ಇಲ್ಲದಿದ್ದರೂ ಭಕ್ತರು ನಿಸ್ವಾರ್ಥ ಹಾಗೂ ಪ್ರತಿಫಲಾಪೇಕ್ಷೆ ಇಲ್ಲದೇ ಮಾಡುವ ಸತ್ಕಾರ್ಯಗಳಿಗೆ ದೇವರ ಕೃಪೆಯಿರುತ್ತದೆ. ಹಾಗೆಯೇ ದುಡಿಮೆಯ ಒಂದಂಶವನ್ನು ಸೇವಾ ಕಾರ್ಯದ ಮೂಲಕ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.
ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಯು.ರಾಜೇಶ ಪೈ ಮೊದಲಾದವರಿದ್ದರು. ದೇವಸ್ಥಾನ ಟ್ರಸ್ಟ್ ಖಜಾಂಚಿ ಮಂಜುನಾಥ ಮಹಾಲೆ ನಿರ್ವಹಿಸಿದರು.
ಸಮಾಜದಿಂದ ಪಡೆದಿದ್ದನ್ನು ಭಗವಂತನಿಗೆ ಮರುಪಾವತಿಸುವುದು ಎಂದರೆ ದೇವಾಲಯ ಜೀರ್ಣೋದ್ಧಾರ ಅಥವಾ ನಿರ್ವಾಣವಾಗಿದೆ. ಹಾಗೆಯೇ ಹೆತ್ತವರನ್ನು ಕೂಡ ಕಡೆಗಣಿಸದಿರುವುದು ಭಗವಂತನ ಅನುಗ್ರಹ ಪಡೆಯುವ ಮಾರ್ಗವಾಗಿದೆ. ಇಂದಿನ ಕಾಲಟ್ಟದಲ್ಲಿ ಹಣಕ್ಕಿಂತ ಹೆಚ್ಚಾಗಿ ಆರೋಗ್ಯ ಮತ್ತು ಮಾನಸಿಕ ನೆಮ್ಮದಿ ಅತೀ ಅಗತ್ಯವಾಗಿದ್ದು, ಧಾರ್ಮಿಕ ಆರಾಧನೆ ಮೂಲಕ ಅವುಗಳನ್ನು ಪಡೆಯಬಹುದು. ಶ್ರೀ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿ ಪರ್ತಗಾಳಿ ಜೀವೋತ್ತಮ ಮಠಾಧೀಶ https://www.vijayavani.net/the-glory-of-saving-a-life-through-blood-donation https://www.vijayavani.net/the-national-highway-is-open-to-danger