ಕಾಳಿಂಗ ಸರ್ಪ ಸೆರೆ

ಕಾಳಿಂಗ ಸರ್ಪ ಸೆರೆ
Published on

ನಾಪೋಕ್ಲು: ಸಮೀಪದ ಕಕ್ಕಬೆಯ ನೆಟ್ಟು ಮಾಡಿನಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಕಾಡಿಗೆ ಬಿಡಲಾಗಿದೆ. ಇಲ್ಲಿನ ವೈಕೋಲ್ ಉಸ್ಮಾನ್ ಅವರ ಮನೆಯ ಸಮೀಪ ಭಾನುವಾರ ದೊಡ್ಡ ಗಾತ್ರದ ಹಾವು ಕಾಣಿಸಿಕೊಂಡಿದೆ. ನಂತರ ಉರಗ ತಜ್ಞ ಪೊನ್ನಿರ ಗಗನ್ ಅವರಿಗೆ ಮಾಹಿತಿ ನೀಡಲಾಯಿತು. ಸೋಮವಾರ ಸ್ಥಳಕ್ಕೆ ಆಗಮಿಸಿ ಪೊನ್ನಿರ ಗಗನ್ ಮಣ್ಣಿನ ಪೊಟರೆಯಲ್ಲಿ ಅಡಗಿದ್ದ ಸುಮಾರು 12 ಅಡಿ ಉದ್ದದ ಕಾಲಿಂಗ ಸರ್ಪವನ್ನು ಸೆರೆ ಹಿಡಿದು ರಕ್ಷಿತ ಅರಣ್ಯಕ್ಕೆ ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net