ಆನಂದಪುರದಲ್ಲಿ ಎರಡು ತಲೆ ಹಾವು ಮಾರಾಟಕ್ಕೆ ಹೊರಟವ ಪೊಲೀಸ್ ಬಲೆಗೆ

snake sale one arrested in kodagu dist
Published on

ಕೊಡಗು: ಎರಡು ತಲೆ ಹಾವನ್ನು ಅಕ್ರಮವಾಗಿ ಮಾರಾಟ ಮಾಡುವುದಕ್ಕೆ ಯತ್ನಿಸುತ್ತಿದ್ದವನೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ. ವಿರಾಜಪೇಟೆ ತಾಲೂಕಿನ ಸಿದ್ಧಾಪುರ ಸಮೀಪದ ಆನಂದಪುರದಲ್ಲಿ ಹಾವು ಮಾರಾಟ ಮಾಡುವುದಕ್ಕೆ ಆತ ಪ್ರಯತ್ನಿಸಿದ್ದ.

ಬಂಧಿತನನ್ನು ಮೈಸೂರಿನ ಶಾಂತಿನಗರದ ಸೈಯದ್ ಮೊಮಿನ್(22) ಎಂದು ಗುರುತಿಸಲಾಗಿದೆ. ಕಡುನೀಲಿ ಮತ್ತು ಹಳದಿ ಬಣ್ಣದ ಏರ್ ಬ್ಯಾಗಿನಲ್ಲಿ ಹಾವನ್ನು ತುಂಬಿಕೊಂಡು ತಂದಿದ್ದ. ಆನಂದಪುರ ಬಸ್​ ನಿಲ್ದಾಣದ ಸಮೀಪ ಈ ಬ್ಯಾಗನ್ನು ಹಿಡಿದುಕೊಂಡು ಗಿರಾಕಿಗಾಗಿ ಕಾಯುತ್ತಿದ್ದ. ಒಂದು ಕೋಟಿ ರೂಪಾಯಿ ಬೆಲೆಗೆ ಹಾವನ್ನು ಮಾರಾಟ ಮಾಡಲು ಮುಂದಾಗಿದ್ದ ಆತ.

ಹಾವು ಮಾರಾಟ ಮಾಡುವುದಕ್ಕೆ ಪ್ರಯತ್ನಿಸುತ್ತಿರುವ ಖಚಿತ ಮಾಹಿತಿ ಸಿಕ್ಕ ಕಾರಣ, ಅರಣ್ಯ ಸಂಚಾರಿ ದಳದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿದ್ದಾರೆ. ಸೈಯದ್ ಬಳಿ ತೆರಳಿ ಹಾವು ಬ್ಯಾಗ್​ನಲ್ಲಿ ಇರುವುದನ್ನು ಖಚಿತಪಡಿಸಿಕೊಂಡು, ಆತನನ್ನು ಬಂಧಿಸಿದ್ದಾರೆ. ಅಲ್ಲದೆ, ಆತನ ಬಳಿ ಇದ್ದ ಹಾವನ್ನು ರಕ್ಷಿಸಲಾಗಿದೆ. (ದಿಗ್ವಿಜಯ ನ್ಯೂಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net