Snake Rescue 1.2 ಅಡಿ ಚಾಕು ನುಂಗಿದ ನಾಗರ ಹಾವು!!

Snake Rescue
Published on

ಕುಮಟಾ Snake Rescue : ನಾಗರಹಾವು ಇಲಿ, ಕೋಳಿ ಮೊಟ್ಟೆ ಹಾಗೆಯೇ ಹಾವುಗಳನ್ನೇ ನುಂಗಿರುವ ಉದಾಹರಣೆ ಆಗಾಗ ಸಿಗುತ್ತಿರುತ್ತದೆ. ಆದರೆ ತನ್ನ ಆಹಾರ ಎಂದು ಭ್ರಮಿಸಿ ಚಾಕುವನ್ನು ನುಂಗಿ ನಂತರ ಅದು ಜೀರ್ಣವಾಗದೇ ಹೊರಕ್ಕೂ ಹಾಕಲಾರದೇ ವಿಲವಿಲ ಒದ್ದಾಡಿದ ಘಟನೆ ಕುಮಟಾ ತಾಲ್ಲೂಕಿನ ಹೆಗಡೆಯ ಗೋವಿಂದ ನಾಯ್ಕರ ಮನೆಯಲ್ಲಿ ನಡೆದಿದೆ. ಉರಗ ತಜ್ಞ ಪವನ್ ನಾಯ್ಕ ಇನ್ನೊಬ್ಬರ ಸಹಾಯದಲ್ಲಿ ಹಾವಿನ ಹೊಟ್ಟೆಯಿಂದ ಚಾಕು ತೆಗೆದು, ಅದನ್ನು ರಕ್ಷಣೆ ಮಾಡಿದ್ದಾರೆ. ಗೋವಿಂದ ನಾಯ್ಕರ ಅಡುಗೆ ಮನೆಯ ಗೋಡೆಯಲ್ಲಿದ್ದ ಚಾಕು ಹೇಗೋ ಹೊರಕ್ಕೆ ಬಿದ್ದಿದ್ದು ಅಲ್ಲಿ ಹಾವು ಓಡಾಡುತ್ತಿದ್ದರಿಂದ ಹೊರಕ್ಕೆ ಹೋಗಲು ಹೆದರಿದ್ದರು. ಕೆಲ ಹೊತ್ತಲ್ಲೇ ಚಾಕು ಕಣ್ಮರೆಯಾಯಿತು. ಅಲ್ಲೇ ಹಾವು ಕೂಡ ಏನೋ ತಿಂದು ವಿಶ್ರಾಂತ ಸ್ಥಿತಿಯಲ್ಲಿದ್ದು, ಹಾವು ಹೋಗಲಿ ಎಂದು ಕೆಲ ಹೊತ್ತು ಸಮಯ ನೀಡಿದ್ದರೂ ಹಾವು ಮಾತ್ರ ಸ್ಥಳದಿಂದ ಕದಲಿಲ್ಲ. ಚಾಕು ಇಲ್ಲದಿದ್ದದ್ದನ್ನು ನೋಡಿ ಅನುಮಾನಿಸಿ ಉರಗ ತಜ್ಞ ಪವನ್ ನಾಯ್ಕ ಅವರಿಗೆ ಮಾಹಿತಿ ನೀಡಿದ್ದರು. Snake Rescueಪವನ್ ಅವರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಹಾವು ಚಾಕು ನುಂಗಿದೆ, ಹಾಗೂ ಚಾಕುವಿನ ತುದಿ ಎದೆಯ ಹತ್ತಿರ ಸಿಲುಕಿದ್ದು ಹೊರಕಲು ಒಡ್ಡಾಡುತ್ತಿರುವುದು  ಕಂಡುಬಂದಿದೆ. ಹೇಗಾದರೂ ಮಾಡಿ ಚಾಕು ಹೊರತೆಗೆಯದಿದ್ದಾರೆ ಹಾವು ಸಾಯುತ್ತದೆ ಎಂದು ಪವನ್ ಅವರು ಪಶು ಆಸ್ಪತ್ರೆಯ ಸಹಾಯಕರಾದ ಅದ್ವೈತ ಭಟ್ ಅವರ ಮನೆಗೆ ಹೋಗಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರಯತ್ನದ ಮೂಲಕ ಚಾಕುವನ್ನು ನಾಗರಹಾವಿನ ಹೊಟ್ಟೆಯಿಂದ ಹೊರ ತೆಗೆಯಲು ಯಶಸ್ವಿಯಾಗಿದ್ದಾರೆ. ನಂತರ ಹಾವನ್ನು ಸುರಕ್ಷಿತ ಸ್ಥಳದಲ್ಲಿ ಬಿಡುಗಡೆಗೊಳಿಸಿದ್ದಾರೆ. ಹಾವಿನ ಹೊಟ್ಟೆಯಲ್ಲಿದ್ದ ಚಾಕು 1 ಅಡಿ 2  ಇಂಚು ಉದ್ದವಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net