ಪ್ರಪಾತಕ್ಕುರುಳಿದ lorry

Lorry PALTI
Published on

ಯಲ್ಲಾಪುರ: lorry ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಟ್ಟದಲ್ಲಿ ಸಂಭವಿಸಿದೆ.

ಹುಬ್ಬಳ್ಳಿಯಿಂದ ಅಂಕೋಲಾ ಕಡೆಗೆ ಹೊರಟಿದ್ದ ಖಾಲಿ ಲಾರಿ, ಅರಬೈಲ್ ಘಟ್ಟದ ಇಳಿಜಾರಿನ ಯೂ ಟರ್ನ್ ಬಳಿ ಚಾಲಕನ ನಿಯಂತ್ರಣ ತಪ್ಪಿ, ಬಲ ಬದಿಯ ಪ್ರಪಾತಕ್ಕೆ ಉರುಳಿದೆ.

ಲಾರಿ ಕೆಳಕ್ಕೆ ಬೀಳುವ ಸೂಚನೆ ಅರಿತ ಚಾಲಕ ಲಾರಿಯಿಂದ ಹಾರಿ ಪಾರಾಗಿದ್ದಾನೆ. ಲಾರಿ ನೂರಾರು ಅಡಿ ಕೆಳಗೆ ಉರುಳಿದೆ. ಲಾರಿ ಉರುಳಿದ ಮಾರ್ಗ ಮಾತ್ರ ಕಾಣುತ್ತಿದ್ದು, ಲಾರಿ ಎಲ್ಲಿ ಬಿದ್ದಿದೆ ಎಂಬುದು ಗೋಚರಿಸುತ್ತಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಲಾರಿ ಹುಡುಕಾಟಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net