VIDEO| ನಿತ್ಯ ಪೂಜೆ ವೇಳೆಗೆ ಬರುತ್ತೆ ಈ ಹಾವು! ಗಣಪತಿಗೆ ಪ್ರದಕ್ಷಿಣೆ ಹಾಕಿ ವಾಪಸ್​ ಹೋಗುತ್ತೆ

tempal snake
Published on

ಕುಣಿಗಲ್​(ತುಮಕೂರು): ಕಲ್ಲುನಾಗರ ಕಂಡರೆ ಹಾಲನ್ನೆರೆದು ಕೈ ಮುಗಿಯುವರು, ನಿಜ ನಾಗರ ಕಂಡರೆ ದೂರ ಸರಿಯುವರು ಎಂಬ ಮಾತಿದೆ. ಆದರೆ ಇಲ್ಲೊಂದು ಕಡೆ ಹಾಗಿಲ್ಲ. ಪೂಜೆ ಸಮಯದಲ್ಲಿ ಗಣಪತಿ ಗುಡಿಗೆ ಬಂದು ಹೋಗುತ್ತಿದ್ದ ಹಾವು ಇದೀಗ ಹೆಚ್ಚುಕಾಲ ಬಾಗಿಲಲ್ಲೇ ವಾಸ್ತವ್ಯ ಹೂಡಿದೆ.

ಇಂತಹ ದೃಶ್ಯ ಕುಣಿಗಲ್ ತಾಲೂಕಿನ ಇಪ್ಪಾಡಿ ಗ್ರಾಮದ ಶ್ರೀ ಜಂಗುಮಹೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಕಾಣಸಿಗಲಿದೆ. ಮೂಲದೇವರನ್ನು ಹೊರತುಪಡಿಸಿ ಇಲ್ಲಿ ಚಾಮುಂಡೇಶ್ವರಿ, ಗಣಪತಿ, ಶನೈಶ್ವರ, ಆಂಜನೇಯ, ಶ್ರೀವಿಷ್ಣು, ಬಸವೇಶ್ವರ ಸೇರಿದಂತೆ ಏಳೆಂಟು ಪುಟ್ಟ ದೇವಾಲಯಗಳಿವೆ.

ಈ ಎಲ್ಲ ದೇವಾಲಯಗಳಿಗೆ ಹಾವುಗಳೇ ಕಾವಲು ಕಾಯುತ್ತಿವೆ ಎಂದು ನಂಬಿದ್ದಾರೆ ಭಕ್ತರು. ಇಲ್ಲಿನ ಅಶ್ವತ್ಥಕಟ್ಟೆ ಸ್ಥಳ ಬಿರುಕು ಮೂಡಿದ ಕಾರಣಕ್ಕೆ ಮರು ನಿರ್ಮಾಣ ಕಾರ್ಯ ನಡೆಯುತ್ತಿದೆ. ಅಶ್ವತ್ಥಕಟ್ಟೆಯಲ್ಲಿ ವಾಸವಿದ್ದ ಹಾವು ಇದೀಗ ಪಕ್ಕದ ಗಣಪತಿ ದೇವಾಲಯದಲ್ಲೇ ಹೆಚ್ಚು ಸಮಯ ಕಳೆಯುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಅಲ್ಲದೆ ದಿನನಿತ್ಯ ಮಧ್ಯರಾತ್ರಿ ನಡೆಯುವ ಪೂಜೆ ಸಮಯದಲ್ಲಿ ದೇವಾಲಯದ ಒಳಗೆ ಬಂದು ಸಂಚರಿಸಿ ವಾಪಸ್​ ತೆರಳುತ್ತೆ. ಈ ದೃಶ್ಯವನ್ನು ಭಕ್ತರೊಬ್ಬರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net