

ವಿರಾಜಪೇಟೆ: ಇಲ್ಲಿನ ಕೆೆದಮುಳ್ಳೂರು ಪಾಲಂಗಾಲ ಗ್ರಾಮದಲ್ಲಿ ವಾಸದ ಮನೆಯೊಳಗೆ ಬಂದಿದ್ದ ಕಾಳಿಂಗ ಸರ್ಪವನ್ನು ಸೆರೆಹಿಡಿದು ಅರಣ್ಯಕ್ಕೆ ಬಿಡಲಾಯಿತು.
ಕರಿನೆರವಂಡ ಜಿತನ್ ಎಂಬುವರ ಮನೆಯಲ್ಲಿ ಸೋಮವಾರ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ವಿರಾಜಪೇಟೆ ಪಟ್ಟಣದ ಆಟೋ ಚಾಲಕ ಸತೀಶ್ ಮೂರು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಹಾವನ್ನು ಸೆರೆಹಿಡಿದಿದ್ದಾರೆ. ಹಾವು ಸುಮಾರು 12ಅಡಿ ಉದ್ದ, 9-10 ಕೆ.ಜಿ ತೂಕವಿದೆ ಎಂದು ಅಂದಾಜಿಸಲಾಗಿದೆ. ಸೆರೆ ಹಿಡಿದ ಹಾವನ್ನು ಮಾಕುಟ್ಟ ಅಭಯಾರಣ್ಯಕ್ಕೆ ಬಿಡಲಾಯಿತು.