ಜಿಲ್ಲೆಯಲ್ಲಿ ಲಾಕ್​ಡೌನ್​ ಇದೆ ಎಂದು ಬೇರೆ ಜಿಲ್ಲೆಯಿಂದ ಅಕ್ರಮವಾಗಿ ಮದ್ಯ ಸಾಗಾಣಿಕೆ! ಸಿಕ್ಕಿಬಿದ್ದ ಕಳ್ಳರು

viya
Published on

ಯಾದಗಿರಿ: ಕರೊನಾ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗಳು ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮ ತೆಗೆದುಕೊಂಡಿವೆ. ಅನೇಕ ಜಿಲ್ಲೆಗಳು ಮದ್ಯ ಮಾರಾಟಕ್ಕೂ ಬ್ರೇಕ್​ ಹಾಕಿವೆ. ಆ ಹಿನ್ನೆಲೆಯಲ್ಲಿ ಕೆಲವರು ಬೇರೆ ಬೇರೆ ಜಿಲ್ಲೆಗಳಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡಿ ಮಾರಾಟ ಮಾಡುವ ಪ್ರಯತ್ನವನ್ನೂ ಮಾಡಲಾರಂಭಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಚೆಕ್ ಪೊಸ್ಟ್ ಬಳಿ ಇದೇ ರೀತಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಗ್ಯಾಂಗ್​ ಒಂದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್​ಡೌನ್ ಇರುವ ಹಿನ್ನೆಲೆಯಲ್ಲಿ ಆ ಗ್ಯಾಂಗ್​ ವಿಜಯಪುರದಿಂದ ರಾಯಚೂರಿಗೆ ಮದ್ಯವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿತ್ತು.

ಅಕ್ರಮ ದಂಧೆಕೋರರು ರಾಯಚೂರು ಜಿಲ್ಲೆಯ ಮಸ್ಕಿ, ಕವಿತಾಳ ಮೂಲದವರು ಎನ್ನಲಾಗಿದೆ. ಅವರ ಬಳಿ ಇದ್ದ 38 ಮದ್ಯದ ಬಾಟಲ್,4 ಕಾರು ಜಪ್ತಿ ಮಾಡಲಾಗಿದೆ. ಹುಣಸಗಿ ಸಿಪಿಐ ದೌಲತ್ ಕುರಿ ನೇತೃತ್ವದ ತಂಡ ಈ ಕಾರ್ಯಚರಣೆ ನಡೆಸಿದ್ದು 13 ಜನ ಆರೋಪಿಗಳ ಬಂಧಿಸಿದ್ದಾರೆ. ನಾರಾಯಣಪುರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net