ಆರ್‌ಆರ್ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅನುವು

FotoJet
Published on

 ವಿಜಯವಾಣಿ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು | ಮಾಗಡಿಯಲ್ಲಿ ವ್ಯಾಪಾರಿಗಳ ಮನವೊಲಿಕೆ ಯಶಸ್ವಿ

ಮಾಗಡಿ : ಬೀದಿ ಬದಿ ವ್ಯಾಪಾರಿ, ಅಂಗಡಿ- ಮುಂಗಟ್ಟುಗಳಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಪುರಸಭೆ, ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಅರಿವು ಮೂಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.

ಪಟ್ಟಣದ ಆರ್‌ಆರ್ ರಸ್ತೆಯಲ್ಲಿ ಬೀದಿಬದಿ ಅಂಗಡಿಗಳ ಹಾವಳಿಯಿಂದ ವಾಹನ, ಸವಾರರು, ಪಾದಚಾರಿಗಳು ಹೈರಾಣಾಗುತ್ತಿದ್ದ ಬಗ್ಗೆ ಮಾ. 24 ರಂದು ‘ವಿಜಯವಾಣಿ’ಯಲ್ಲಿ ‘ಅಂಗಡಿಗಳಿಂದ ಸಂಚಾರಕ್ಕೆ ತೊಂದರೆ’ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆಯಾಗಿತ್ತು.

ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಸ್ಥಳೀಯಾಡಳಿತ ಇನ್‌ಸ್ಪೆಕ್ಟರ್ ಜಿ.ವೈ.ಗಿರಿರಾಜು, ಮುಖ್ಯಾಧಿಕಾರಿ ಶಿವರುದ್ರಯ್ಯ ನೇತೃತ್ವದಲ್ಲಿ ಸೋಮವಾರ ಸಂಜೆ ವರ್ತಕರ ಸಂಘದ ಪದಾಧಿಕಾರಿಗಳ ತೆ ಸಭೆ ನಡೆಸಿ, ಮಂಗಳವಾರ ಪುರಸಭೆ ಅಧಿಕಾರಿಗಳು, ಪೊಲೀಸರು ಕಾರ್ಯಚರಣೆಗೆ ನಡೆಸಿ ರಸ್ತೆ ಆವರಿಸಿಕೊಂಡು ವ್ಯಾಪಾರ ಮಾಡುತ್ತಿದ್ದವರಿಗೆ ತಿಳಿ ಹೇಳಿ ುಟ್ಪಾತ್ ಬಿಟ್ಟು ಅಂಗಡಿ ಇಟ್ಟುಕೊಳ್ಳುವಂತೆ ತಿಳಿಸಿದರು. ಈ ವೇಳೆ ವಿರೋಧ ವ್ಯಕ್ತ ಪಡಿಸಿದ ಕೆಲವರನ್ನು ಮುಖ್ಯಾಧಿಕಾರಿ ಶಿವರುದ್ರಯ್ಯ ಮನವೊಲಿಸಿದರು.

ಶಿವರುದ್ರಯ್ಯ ಮಾತನಾಡಿ, ಆರ್‌ಆರ್ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದ ಬಗ್ಗೆ ನಾಗರಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಪುರಸಭೆ ನಿಗದಿ ಪಡಿಸಿದ ಸ್ಥಳದಲ್ಲಿ ವ್ಯಾಪಾರ ಮಾಡುವಂತೆ ವ್ಯಾಪಾರಿಗಳಿಗೆ ಸೂಚಿಸಲಾಗಿದೆ. ಇನ್ನು ಮುಂದೆಯೂ ಇದೇ ರೀತಿಯಾದರೆ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಲಾಗುವುದು. ರಸ್ತೆಯನ್ನು ಮತ್ತಷ್ಟು ವಿಸ್ತರಿಸಲೂ ಕ್ರಮಕೈಗೊಳ್ಳಲಾಗಿದೆ ಎಂದರು.

ಅಂಗಡಿ-ಮುಂಗಟ್ಟುಗಳಿಗೆ ಲಾರಿಯಲ್ಲಿ ದಾಸ್ತಾನು ತಂದು ರಸ್ತೆಯಲ್ಲಿ ನಿಲ್ಲಿಸುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಕೆಂಪೇಗೌಡ ವೃತ್ತ ಹಾಗೂ ಶಿವಕುಮಾರ ಸ್ವಾಮೀಜಿ ವೃತ್ತದ ಬಳಿ ಬೆಳಗ್ಗೆ 10 ರಿಂದ 4 ಗಂಟೆಯ ಒಳಗೆ ದಾಸ್ತಾನು ಲಾರಿಗಳ ನಿಲುಗಡೆ ಮಾಡಿ, ದಾಸ್ತಾನು ಸರಬರಾಜು ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.

8 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಲು ಶಾಸಕ ಎಚ್.ಸಿ.ಬಾಲಕೃಷ್ಣ ಸೂಚನೆ ನೀಡಿದ್ದು, ಇದಾದ ನಂತರ ಬೀದಿ, ಬದಿ ವ್ಯಾಪಾರಿಗಳನ್ನು ಸ್ಥಳಾಂತರಿಸಲಾಗುವುದು. ಹಳೆಯ 21 ಅಂಗಡಿಗಳನ್ನು ತೆರವುಗೊಳಿಸಿ ಹೊಸ ಅಂಗಡಿ ನಿರ್ಮಿಸಲಾಗುವುದು ಎಂದರು.

ಪಟ್ಟಣದ ಕೆಂಪೇಗೌಡ ವೃತ್ತದಿಂದ ಶಿವಕುಮಾರಸ್ವಾಮೀಜಿ ವೃತ್ತದವರೆಗೆ ಏಕಮುಖ ಸಂಚಾರಗೊಳಿಸಿ ನಾಗರಿಕರಿಗೆ ಸುಗಮ ಸಂಚಾರ ಕಲ್ಪಿಸಲು ಅನುಮತಿಗಾಗಿ ಸಂಬಂಧ ಪಟ್ಟವರಿಗೆ ಪತ್ರ ಬರೆಯಲಾಗಿದೆ ಎಂದರು.

ಆರ್‌ಐ ರವಿ, ಹಿರಿಯ ಆರೋಗ್ಯ ನೀರಿಕ್ಷಕ ಶಿವಕುಮಾರ್, ಕಂದಾಯ ವಸೂಲಿಗಾರರಾದ ಮೋಹನ್, ಹನುಮಯ್ಯ, ನಾಗರಾಜು, ಪೌರಕಾರ್ಮಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net