ಧೂಮಪಾನ ಅನಾರೋಗ್ಯಕ್ಕೆ ದಾರಿ

31blh3 ತಂಬಾಕು ದಿನಾಚರಣೆ
Published on

ಬೈಲಹೊಂಗಲ: ತಂಬಾಕು ಸೇವಿಸಿದಾಗ ಶ್ವಾಸಕೋಶದ ಮೇಲೆ ನೇರ ಪರಿಣಾಮ ಬಿದ್ದು, ಇತರ ಅಂಗಗಳಿಗೂ ಹಾನಿಯುಂಟಾಗಲಿದೆ. ಸಾರ್ವಜನಿಕ ಸ್ಥಳದಲ್ಲಿ ಬೀಡಿ, ಸಿಗರೇಟ್​ ಸೇದುವವರ ಸಂಖ್ಯೆಯೂ ಹೆಚ್ಚುತ್ತಿದೆ. ಧೂಮಪಾನಿಗಳ ಹೊಗೆ ಸೇವಿಸಿದವರೂ ಅನಾರೋಗ್ಯಕ್ಕೆ ತುತ್ತಾಗುವ ಸಂಭವವಿದ್ದು, ಅವರಿಂದ ಅಂತರ ಕಾಪಾಡಿಕೊಳ್ಳಬೇಕು ಎಂದು ಪ್ರಧಾನ ದಿವಾಣಿ ನ್ಯಾಯಾಧೀಶ ಬಸವರಾಜ ನಾಯಕ ಹೇಳಿದರು.

ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವತ್ತದಲ್ಲಿ ಜಿಲ್ಲಾ ಮತ್ತು ತಾಲೂಕು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಆಸ್ಪತ್ರೆ, ಎಸ್​ಜಿವಿ ಆಯುರ್ವೇದ ವೆದ್ಯಕಿಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ, ತಾಲೂಕು ಕಾನೂನು ಸೇವಾ ಸಮಿತಿ ಸಂಯುಕ್ತ ಆಶ್ರಯದಲ್ಲಿ ಶನಿವಾರ ವಿಶ್ವ ತಂಬಾಕು ರಹಿತ ದಿನ ಮತ್ತು ವಿಶ್ವ ಅಧಿಕ ರಕ್ತದೊತ್ತಡ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ೇತ್ರ ಆರೋಗ್ಯ ಅಧಿಕಾರಿ ಎಸ್​.ಎಸ್​. ಮುತ್ನಾಳ ಉಪನ್ಯಾಸ ನೀಡಿದರು. ತಾಲೂಕು ಆರೋಗ್ಯ ಅಧಿಕಾರಿ ಡಾ. ಎಸ್​.ಎಸ್​. ಸಿದ್ದನ್ನವರ, ವೆದ್ಯಾಧಿಕಾರಿ ಡಾ. ನಿರ್ಮಲಾ ಮಹಾಂತಶೆಟ್ಟಿ, ವಕೀಲರ ಸಂದ ಉಪಾಧ್ಯ ಎ.ಎಂ. ಸಿದ್ರಾಮನಿ, ವಿ.ಜಿ. ಕಟದಾಳ, ಎನ್​.ಡಿ. ಖಾಡೆ, ರಾಧಾ ರಜಪೂತ, ಎಂ.ವಿ. ಮೂಲಿಮನಿ, ಡಾ.ಅಭಿಜಿತ್​ ಮೊರಲೆ, ಡಾ.ಅಶ್ವಿನಿ ಕೊಶೆಟ್ಟಿ, ಡಾ.ಮಂಜುಳಾ ತುರಮರಿ, ಡಾ ಸುಷ್ಮಾ ಮಾರಿಹಾಳ, ಡಾ.ಶ್ರೀನಿವಾಸ ಕಾಂಬಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net