ಎಸ್.ಎಂ.ಕೃಷ್ಣ ಪಾರ್ಥಿವ ಶರೀರಕ್ಕೆ ಅಂತಿಮ ನಮನ

ssll
Published on

ರಾಮನಗರ : ಜಿಲ್ಲೆಗೆ ಆಗಮಿಸಿದ ವಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರಕ್ಕೆ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದರು.

ಬೆಂಗಳೂರಿನಿಂದ ಬುಧವಾರ ಬೆಳಗ್ಗೆ ಬೆಂಗಳೂರು-ಮೈಸೂರು ರಸ್ತೆಯಲ್ಲಿ ಸಾಗಿ ಬಂದ ಎಸ್.ಎಂ.ಕೃಷ್ಣ ಪಾರ್ಥಿವ ಶರೀರ ಹೊತ್ತು ತಂದ ವಾಹನಕ್ಕೆ ರಾಮನಗರದ ಐಜೂರು ಸರ್ಕಲ್‌ನಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ, ನಗರಸಭೆಯಿಂದ ವ್ಯವಸ್ಥೆ ವಾಡಿದ್ದ ಸ್ಥಳದಲ್ಲಿ ಸುವಾರು 10 ನಿಮಿಷಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಯಿತು. ನಂತರ ವಾಹನ ಚನ್ನಪಟ್ಟಣದ ಕಡೆ ಸಾಗಿತು.

ರಾಜಕೀಯ ಗಣ್ಯರು, ಎಸ್.ಎಂ.ಕೃಷ್ಣ ಅಭಿವಾನಿಗಳು, ವಿವಿಧ ಪಕ್ಷಗಳ ನಾಯಕರು, ರೈತ ಮುಖಂಡರು, ಪಕ್ಷಾತೀತವಾಗಿ ಹಿರಿಯ ಕಿರಿಯರೆನ್ನದೆ ಮಹಿಳೆಯರೂ ಸೇರಿ ಸಾವಿರಾರು ಜನರು ದರ್ಶನ ಪಡೆದರು.

ವಿವಿಧೆಡೆ ದರ್ಶನ: ಜಿಲ್ಲಾಡಳಿತ ಐಜೂರು ಸರ್ಕಲ್‌ನಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ವಾಡಿತ್ತು. ಬಿಡದಿಯಿಂದ ರಾಮನಗರ ಪ್ರವೇಶಿಸುತ್ತಿದ್ದಂತೆಯೇ ಸಾರ್ವಜನಿಕರು ವಾಯಗಾನಹಳ್ಳಿ, ಸಂಗನಬಸವನದೊಡ್ಡಿ, ಬಸವನಪುರ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ, ವಿಜಯನಗರ ಆಂಜನೇಯ ಆರ್ಚ್ ಸಮೀಪ, ಪಿ.ಡಬ್ಲ್ಯುಡಿ ಕ್ವಾಟರ್ಸ್, ರೋಟರಿ ಸರ್ಕಲ್ ಬಳಿ ವಾಹನ ನಿಲ್ಲಿಸಿ ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರದ ದರ್ಶನ ಪಡೆದರು.

ಜನಸ್ತೋಮ: ರಾಮನಗರ ಜಿಲ್ಲೆಯಲ್ಲೂ ಎಸ್.ಎಂ.ಕೃಷ್ಣ ಒಡನಾಟ ಇತ್ತು. ಈ ಹಿನ್ನೆಲೆಯಲ್ಲಿ ಅವರ ಅಭಿವಾನಿಗಳು ಐಜೂರು ಸರ್ಕಲ್‌ನಲ್ಲಿ ಬೆಳಗ್ಗೆ 8 ಗಂಟೆಯಿಂದಲೇ ಜನರು ಜವಾಯಿಸಿದ್ದರು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮುಂಭಾಗ ಮತ್ತು ವಾಗಡಿ ರಸ್ತೆ, ಬೆಂಗಳೂರು-ಮೈಸೂರು ರಸ್ತೆ ಪಕ್ಕದ ಕಟ್ಟಡಗಳ ಮೇಲೆ ರಸ್ತೆ ಅಕ್ಕಪಕ್ಕದಲ್ಲಿ ನಿಂತು ಪಾರ್ಥಿವ ಶರೀರದ ದರ್ಶನ ಪಡೆದರು. ರಸ್ತೆ ಮತ್ತು ಅಕ್ಕಪಕ್ಕದ ಕಟ್ಟಡಗಳ ಮೇಲೆ ಜನಸ್ತೋಮ ಕಂಡುಬಂತು. ಪಾರ್ಥಿವ ಶರೀರ ಹೊತ್ತು ತಂದ ವಾಹನದ ಮೇಲೆ ಕಟ್ಟಡ ಮೇಲೆ ನಿಂತವರು ಪುಷ್ಪವೃಷ್ಟಿ ಸುರಿಸಿದರು. ವಾಹನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುವಾರ್, ವಾಜಿ ಸಂಸದ ಡಿ.ಕೆ.ಸುರೇಶ್ ಇತರ ನಾಯಕರು ಇದ್ದರು.

ಶಾಸಕ ಎಚ್.ಸಿ.ಬಾಲಕೃಷ್ಣ, ವಾಜಿ ಶಾಸಕರಾದ ಕೆ.ರಾಜು, ಸಿ.ಎಂ.ಲಿಂಗಪ್ಪ, ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್, ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ, ತಹಸೀಲ್ದಾರ್ ತೇಜಸ್ವಿನಿ, ಪೌರಾಯುಕ್ತ ಡಾ.ಜಯಣ್ಣ, ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್‌ಕುವಾರ್, ಮುಖಂಡರಾದ ಕೆ.ಶೇಷಾದ್ರಿ, ಜಿಯಾವುಲ್ಲಾ, ವಿಜಯಕುವಾರಿ, ಮಂಜುನಾಥ್, ಸಿ.ಎ.ಎನ್.ಆರ್.ವೆಂಕಟೇಶ್, ಗಿರಿಜಮ್ಮ, ಅಜ್ಮಥ್, ಗುರುಪ್ರಸಾದ್, ಪಾರ್ವತಮ್ಮ, ಜಯಣ್ಣ, ವಿ.ಎಚ್.ರಾಜು ಮುಂತಾದವರು ದರ್ಶನ ಪಡೆದರು.

ಜಿಲ್ಲಾಡಳಿತದಿಂದ ವ್ಯವಸ್ಥೆ  ಅಂತಿಮ ದರ್ಶನಕ್ಕೆ ಸೂಕ್ತ ವ್ಯವಸ್ಥೆ ವಾಡಿದ್ದ ಜಿಲ್ಲಾಡಳಿತ ಬೆಂಗಳೂರು-ಮೈಸೂರು ರಸ್ತೆಯನ್ನು ಒನ್‌ವೇ ವಾಡಿ ಬೇರೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿ, ಬ್ಯಾರಿಕೇಡ್ ಅಳವಡಿಸಿ ದರ್ಶನಕ್ಕೆ ಶಾಮಿಯಾನ ಹಾಕಿಸಿ ವ್ಯವಸ್ಥೆ ವಾಡಿತ್ತು. ಪೊಲೀಸ್ ಇಲಾಖೆಯಿಂದ ಸ್ಥಳದಲ್ಲಿ ಸೂಕ್ತ ಬಂದೋಬಸ್ತ್ ವಾಡಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net