ಮದ್ರಸದಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

01 (1)
Published on

ಬಂಟ್ವಾಳ: ಕೊಡಾಜೆ ಬದ್ರಿಯಾ ಜುಮಾ ಮಸೀದಿಯ ಅಧೀನದ ತರ್ಬಿಯತುಲ್ ಇಸ್ಲಾಂ ಮದ್ರಸದ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಹಾಗೂ ಶಿಕ್ಷಕ- ರಕ್ಷಕರ ಸಭೆ ಇತ್ತೀಚೆಗೆ ನಡೆಯಿತು.

ಸ್ಮಾರ್ಟ್ ಕ್ಲಾಸ್ ಹಾಗೂ ಶಿಕ್ಷಕ ರಕ್ಷಕರ ಸಭೆಯನ್ನು ಕೊಡಾಜೆ ಬದ್ರಿಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಳ ಉದ್ಘಾಟಿಸಿದರು. ಮಸೀದಿ ಅಧ್ಯಕ್ಷ ಅಬ್ಬಾಸ್ ನೇರಳಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಪಂತಡ್ಕ ಮಸೀದಿ ಉಸ್ತುವಾರಿ ಸಮಿತಿ ಅಧ್ಯಕ್ಷ ಹಂಝ ಪಂತಡ್ಕ, ಉಪಾಧ್ಯಕ್ಷ ಇಬ್ರಾಹಿಂ ನೆಡ್ಯಾಲು, ಜತೆ ಕಾರ್ಯದರ್ಶಿ ಇಂಜಿನಿಯರ್ ಲತೀಫ್ ಕೊಡಾಜೆ, ಅಬ್ದುರ‌್ರಹ್ಮಾನ್ ಫೈಝಿ ನೆಡ್ಯಾಲು ಉಪಸ್ಥಿತರಿದ್ದರು.

ಪಂತಡ್ಕ ಮದರಸ ಮುಖ್ಯಶಿಕ್ಷಕ ಜಾಫರ್ ಸ್ವಾದಿಕ್ ಅರ್ಶದಿ ಸ್ವಾಗತಿಸಿದರು. ಪಂತಡ್ಕ ಹಾಗೂ ಕೊಡಾಜೆ ಮದ್ರಸ ಉಸ್ತುವಾರಿ ಲತೀಫ್ ನೇರಳಕಟ್ಟೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net