

ಪಾಂಡವಪುರ: ತಾಲೂಕಿನ ಮಲ್ಲಿಗೆರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಎಂ.ಕುಮಾರ್ ಅವಿರೋಧ ಆಯ್ಕೆಯಾದರು.
ಎಂ.ಕೆ.ರಮೇಶ್ ಅವರ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಎಸ್.ಎಂ.ಕುಮಾರ್ ಹೊರತುಪಡಿಸಿ ಬೇರ‌್ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ನಿರ್ಮಲಾ ಅವಿರೋಧ ಆಯ್ಕೆ ಘೋಷಿಸಿದರು.
ಸಂಘದ ಉಪಾಧ್ಯಕ್ಷ ಮಹೇಂದ್ರಾಚಾರಿ, ನಿರ್ದೇಶಕರಾದ ಎಂ.ಕೆ.ರಮೇಶ್, ಎಂ.ಪಿ.ಪ್ರದೀಪ್, ಎಂ.ಪ್ರಸನ್ನ, ಉಮೇಶ್, ಎಂ.ಟಿ.ಅಶೋಕ್, ಎಸ್.ರವಿ, ಎಂ.ಟಿ.ಅಣ್ಣೇಗೌಡ, ಸುವರ್ಣಾ, ನಾಗಮ್ಮ, ಕಾರ್ಯದರ್ಶಿ ರಂಜಿತ್, ಗ್ರಾಪಂ ಮಾಜಿ ಅಧ್ಯಕ್ಷ ಎಂ.ನಾಗರಾಜು, ಚಂದ್ರೇಗೌಡ, ಮುಖಂಡರಾದ ರಘು, ನಿತ್ಯಾನಂದ, ಮಂಜುನಾಥ್, ವಸಂತ ಕುಮಾರ್, ರಾಮಕೃಷ್ಣೇಗೌಡ, ರಾಜೇಗೌಡ, ಎಂ.ಎಸ್.ಜಗದೀಶ್ ಇದ್ದರು.