ಸ್ಕೋಡಾ ಆಕ್ಟೇವಿಯಾ ಆರ್‌ಎಸ್ ಕಾರು ಮಾರುಕಟ್ಟೆಗೆ : 49.99 ಲಕ್ಷ ರೂ.ದರ

skoda
Published on

ಬೆಂಗಳೂರು: ‘ಸ್ಕೋಡಾ ಆಟೋ ಇಂಡಿಯಾ’ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದು, ಈ 25 ವರ್ಷದ ಪಯಣವನ್ನು ವಿಶೇಷವಾಗಿ ಆಚರಿಸಿಕೊಳ್ಳುತ್ತಿದೆ. ಈ ನಿಮಿತ್ತ ಸ್ಕೋಡಾ ಬ್ರ್ಯಾಂಡ್‌ನ ‘ಆಕ್ಟೇವಿಯಾ ಆರ್‌ಎಸ್’ ನೂತನ ಕಾರು ಮಾರುಕಟ್ಟೆಗೆ ಬಿಡುಗಡೆಯಾಗಿದೆ. 4 ವರ್ಷವರೆಗೆ 1 ಲಕ್ಷ ಕಿಮೀವರೆಗೆ ವಾರಂಟಿ, 4 ವರ್ಷದ ಕಾಂಪ್ಲಿಮೆಂಟರಿ ರೋಡ್‌ಸೈಡ್ ಅಸಿಸ್ಟೆನ್ಸ್ ಲಭ್ಯವಿದೆ. ಕಾರಿನ ಬೆಲೆ 49.99 ಲಕ್ಷ ರೂ. (ಎಕ್ಸ್ ಶೋರೂಂ) ಇದೆ.

10 ಏರ್‌ಬ್ಯಾಗ್, ಹೆಡ್ ಅಪ್ ಡಿಸ್‌ಪ್ಲೇ ಮತ್ತು 360 ಡಿಗ್ರಿ ಏರಿಯಾ ವ್ಯೆ ಕ್ಯಾಮರಾ ಸೇರಿ ಇತರ ಸೌಲಭ್ಯ ಹೊಂದಿರುವ ‘ಆಕ್ಟೇವಿಯಾ ಆರ್‌ಎಸ್’, ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುತ್ತಿದೆ. ಹಸಿರು, ನೀಲಿ, ಕೆಂಪು, ಕಪ್ಪು ಸೇರಿ 5 ಬಣ್ಣಗಳಲ್ಲಿ ಲಭ್ಯವಿದೆ. ಮುಂಗಡವಾಗಿ ಕಾರು ಬುಕಿಂಗ್‌ಗೆ ಅವಕಾಶವಿದೆ. ನ.6ರಿಂದ ಗ್ರಾಹಕರಿಗೆ ನೀಡಲಾಗುತ್ತದೆ.

‘ಸ್ಕೋಡಾ ಆಟೋ ಇಂಡಿಯಾ’ ಬ್ರ್ಯಾಂಡ್‌ನ ನಿರ್ದೇಶಕ ಆಶಿಶ್ ಗುಪ್ತಾ ಪ್ರತಿಕ್ರಿಯಿಸಿ, ವಿಶಿಷ್ಟ ಮಾಡಲ್‌ನ ಕಾರು ದೇಶದ ಗ್ರಾಹಕರ ಭರವಸೆಯನ್ನು ಈಡೇರಿಸಿದೆ. ದೇಶದಲ್ಲಿ ಸಂಸ್ಥೆಯ 25 ವರ್ಷದ ಕಾರ್ಯಚರಣೆಯ ಅಂಗವಾಗಿ ಸ್ಕೋಡಾ ಕುಟುಂಬಕ್ಕೆ ಹೊಸ ಗ್ರಾಹಕರನ್ನು ಸ್ವಾಗತಿಸಲಿದ್ದೇವೆ. ಈ ಕಾರಿನಲ್ಲಿ 2.0 ಟಿಎಸ್‌ಐ ಟರ್ಬೋಚಾರ್ಜ್ಡ್ ಪೆಟ್ರೋಲ್ ಇಂಜಿನ್ ಇದೆ. 195 ಕಿಲೋವ್ಯಾಟ್ ಪವರ್ ಮತ್ತು 370 ಎನ್‌ಎಂ ಟಾರ್ಕ್ ಹೊಂದಿದೆ. 7 ಸ್ವೀಡ್ ಡಿಎಸ್‌ಜಿ ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್ ಇದೆ. ಗರಿಷ್ಠ ವೇಗ 250 ಕಿಮೀವರೆಗೆ ಇದೆ ಎಂದರು.

ಬೋಲ್ಡ್ ವಿನ್ಯಾಸದ ಶೈಲಿ ಹೊಂದಿರುವ ಕಾರು, ಎಲ್‌ಇಡಿ ಮ್ಯಾಟ್ರಿಕ್ಸ್ ಹೆಡ್‌ಲೈಟ್, ಎಲ್‌ಇಡಿ ಟೇಲ್ ಲ್ಯಾಂಪ್, ಡೈನಾಮಿಕ್ ಇಂಡಿಕೇಟರ್ ಹೊಂದಿದೆ. ಅದ್ಭುತವಾದ ಟೈಯರ್‌ಗಳಿರುವ ಈ ಕಾರು, 7,709 ಎಂಎಂ ಉದ್ದ, 1,829 ಎಂಎಂ ಅಗಲ ಮತ್ತು 1,457 ಎಂಎಂ ಎತ್ತರ ಇದೆ. ವೈರ್‌ಲೆಸ್ ಚಾರ್ಜಿಂಗ್ ವ್ಯವಸ್ಥೆ ಇದೆ. ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ (ಎಸಿಸಿ), ಆಟೋನಾಮಸ್ ಎಮರ್ಜೆನ್ಸಿ ಬ್ರೇಕಿಂಗ್(ಎಇಬಿ), ಇಂಟಲಿಜೆಂಟ್ ಪಾರ್ಕ್ ಅಸಿಸ್ಟ್ ಮತ್ತು ಸ್ಪೀಕರ್ ಸೌಂಡ್ ಸಿಸ್ಟಂ ಸೌಲಭ್ಯವಿದೆ. ಪ್ರತಿನಿತ್ಯದ ಸಂಚಾರಕ್ಕೆ ಈ ಕಾರನ್ನು ಬಳಸಬಹುದು ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net