

ಬೆಳಗಾವಿ: ವಿದ್ಯಾರ್ಥಿಗಳ ಕೌಶಲ ವೃದ್ಧಿಸಲು ಹ್ಯಾಕ್ಫೆಸ್ಟ್ ಸಹಕಾರಿಯಾಗಿದ್ದು, ಸದುಪಯೋಗ ಪಡೆಯಬೇಕು ಎಂದು ಎಸ್.ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ ಸಂಸ್ಥೆ ಅಧ್ಯಕ್ಷ ಡಾ.ಎಫ್.ವಿ. ಮಾನ್ವಿ ಸಲಹೆ ನೀಡಿದರು. ಇಲ್ಲಿನ ಶಿವಬಸವ ನಗರದ ಎಸ್.ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಹ್ಯಾಕ್ಫೆಸ್ಟ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯದ ವಿವಿಧ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಾಚಾರ್ಯ ಬಿ.ಆರ್. ಪಟಗುಂದಿ, ಧಾರವಾಡ ಐಐಐಟಿಯ ಡಾ. ಸುನೀಲ ಸಿ.ಕೆ., ಡಾ.ಪ್ರಶಾಂತ ಭಗವತಿ, ಡಾ.ಬಿ.ಎಸ್. ಹಲಕರ್ಣಿಮಠ, ಡಾ.ಅಶೋಕ ಹುಲಗಬಳಿ ಹಾಗೂ ಇತರರಿದ್ದರು.