

ಬಂಟ್ವಾಳ: ನಂದಾವರದ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬ ದೇವಸ್ಥಾನದಲ್ಲಿ ಕೊನೆಯ ಕಾರ್ತಿಕ ಸೋಮವಾರದ ಅಂಗವಾಗಿ ಪ್ರತಿವರ್ಷದಂತೆ ಸಜೀಪ ಮಾಗಣೆ ವತಿಯಿಂದ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಸೀಯಾಳಾಭಿಷೇಕ ನಡೆಯಿತು.
ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ಪ್ರಧಾನ ಅರ್ಚಕ ಮಹೇಶ ಭಟ್ ಮಾಡದಾರ ಗುತ್ತು ಗಡಿ ಪ್ರಧಾನರಾದ ನಾರಯಣ ಆಳ್ವ ಯಾನೆ ಶಶಿಧರ ರೈ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ, ಗಡಿ ಪ್ರಧಾನರಾದ ಆಳ್ವರಪಾಲು ಗುತ್ತು ಗಂಗಾಧರ ಭಂಡಾರಿ, ನಗ್ರಿಗುತ್ತು ಜಯ ಶೆಟ್ಟಿ, ಶಂಕರ ಪೂಜಾರಿ ಯಾನೆ ಕೋಚ ಪೂಜಾರಿ, ಕುಂಞ ಪೂಜಾರಿ ಯಾನೆ ದಯಾನಂದ ಪೂಜಾರಿ, ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ಮೋಹನದಾಸ ಪೂಜಾರಿ, ಅಭಿವೃದ್ಧಿ ಸಮಿತಿ ಸದಸ್ಯ ದಾಮೋದರ ಬಿ.ಎಂ. ಹಾಗೂ ಮಾಗಣೆಯ ಗುತ್ತು ಮನೆತನದವರು ಉಪಸ್ಥಿತರಿದ್ದರು.