ಸತಿ-ಪತಿ ಹೊಂದಾಣಿಕೆಯಿಂದ ಸಂಸಾರ ಸರಾಗ : ಗೋಪಾಲಕೃಷ್ಣ ಪಟೇಲ್ ಚಾರ್ವಾಕ ಅನಿಸಿಕೆ

New Project (9)
Published on

ಕಡಬ: ಪ್ರತಿ ಸನ್ನಿವೇಶದಲ್ಲೂ ಸತಿ-ಪತಿ ಹೊಂದಾಣಿಕೆಯಿಂದ ಸಾಗಿದರೆ ಸಂಸಾರ ಸುಂದರ. ದಾಂಪತ್ಯದ ಪ್ರತಿಕ್ಷಣವೂ ಸುಮಧುರವಾಗಿರಬೇಕು ಎಂದು ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ದಶವಾನೋತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಪಟೇಲ್ ಚಾರ್ವಾಕ ಹೇಳಿದರು.

ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಪುತ್ತೂರು, ದಶವಾನೋತ್ಸವ ಸಮಿತಿಯ ಸಹಯೋಗದೊಂದಿಗೆ ಒಕ್ಕಲಿಗ ಸ್ವಸಹಾಯ ಒಕ್ಕೂಟ, ಯುವ ಸಂ, ಮಹಿಳಾ ಸಂಘ ಗ್ರಾಮ ಸಮಿತಿಗಳ ಸಹಕಾರದೊಂದಿಗೆ ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ದಶವಾನೋತ್ಸವದ ಸಂಭ್ರಮದ ಅಂಗವಾಗಿ ಶನಿವಾರ ಕುದ್ಮಾರು ಅನ್ಯಾಡಿ ತರವಾಡು ಮನೆಯಲ್ಲಿ 50 ವರ್ಷ ದಾಂಪತ್ಯ ನಡೆಸಿದ 6 ಜೊತೆ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ವಾತನಾಡಿದರು.

ಕುದ್ಮಾರು ಒಕ್ಕಲಿಗ ಸ್ವಸಹಾಯ ಸಂದ ಒಕ್ಕೂಟದ ಅಧ್ಯಕ್ಷ ಶೂರಪ್ಪ ಗೌಡ ಪಟ್ಟೆತ್ತಾನ ಅಧ್ಯಕ್ಷತೆ ವಹಿಸಿದ್ದರು. ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ಅಧ್ಯಕ್ಷ ಡಿ.ವಿ.ಮನೋಹರ್, ಟ್ರಸ್ಟ್‌ನ ಉಪಾಧ್ಯಕ್ಷ ಪ್ರವೀಣ್ ಕುಂಟ್ಯಾನ, ಒಕ್ಕಲಿಗ ಸೇವಾ ಸಂದ ಸವಣೂರು ವಲಯದ ಕಾರ್ಯದರ್ಶಿ ನಾಗೇಶ್ ಕೆ.ಕೆಡೆಂಜಿ, ಅಧ್ಯಕ್ಷೆ ಅನಿತಾ ಲಕ್ಷಣ ಗೌಡ, ವಾಗಣೆ ಗೌಡ ಮುಖ್ಯಸ್ಥ ದೇವಪ್ಪ ಗೌಡ ನಡುಮನೆ, ಅನ್ಯಾಡಿ ಬಾರಿಕೆ ಕುಟುಂಬದ ಆಡಳಿತ ಸಮಿತಿ ಅಧ್ಯಕ್ಷ ಯೋಗೀಶ್ ಕೆಡೆಂಜಿ, ಕುದ್ಮಾರು ಗ್ರಾಮ ಸಮಿತಿ ಅಧ್ಯಕ್ಷ ವಿಟ್ಠಲ ಗೌಡ ಕಾಪೆಜಲು, ಮಹಿಳಾ ಗ್ರಾಮ ಸಮಿತಿ ಅಧ್ಯಕ್ಷೆ ಪುಷ್ಪಾಲತಾ ಉಪಸ್ಥಿತರಿದ್ದರು. ಪ್ರೇರಕಿ ಹೇಮಲತಾ ಸ್ವಾಗತಿಸಿದರು. ಮೇಲ್ವಿಚಾರಕ ವಿಜಯ ಕುವಾರ್ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net