

ಮಂಗಳೂರು : ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಹಾಗೂ ದ.ಕ.ಜಿಲ್ಲಾ ಕುಡಾಳ್ ದೇಶಸ್ಥ ಬ್ರಾಹ್ಮಣ ಸಂಘದ ವತಿಯಿಂದ ಬಂಟ್ವಾಳದ ಶ್ರೀ ಮಂಜುನಾಥ ಸ್ವಾಮಿ ಸಭಾಭವನದಲ್ಲಿ 27ನೇ ವಾರ್ಷಿಕ ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ಮುಖ್ಯ ಅತಿಥಿಯಾಗಿದ್ದ ಮುಂಬೈಯ ಬಾಬಾ ಆಟೋಮಿಕ್ ರಿಸರ್ಚ್ ಸೆಂಟರ್ನ ನಿವೃತ್ತ ಅಧಿಕಾರಿ ಅನಿಲ್ ಅಚ್ಯುತ ನಾಯಕ್ ಮಾತನಾಡಿ ‘ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು. ವಿದ್ಯಾರ್ಥಿ ಜೀವನದಲ್ಲಿ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ನಾಯಕತ್ವ ಗುಣಗಳ ಜತೆಗೆ ಸವಾಲುಗಳನ್ನು ಎದುರಿಸುವ ಶಕ್ತಿ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಇದಕ್ಕಾಗಿ ಕೌಶಲಗಳನ್ನು ಶಿಕ್ಷಣದ ಜತೆಯಲ್ಲಿ ಬೆಳೆಸಿಕೊಳ್ಳಬೇಕು ಎಂದರು.
ಬೆಂಗಳೂರಿನ ಯುನಿಸಿಸ್ ಗ್ಲೋಬಲ್ ಸರ್ವಿಸಸ್ನ ಕಾರ್ಯನಿರ್ವಾಹಕ ನಂದಕಿಶೋರ್ ಬಾಯಿಲ , ಬನ್ನೂರು ಉಮೇಶ್ ಪ್ರಭು , ಕೆಎಂಸಿ ಆಸ್ಪತ್ರೆ ಮಣಿಪಾಲದ ಎಚ್ಆರ್ ಮ್ಯಾನೇಜರ್ ಸುಚೇತ ನಾಯಕ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಪ್ರತಿಷ್ಠಾನದ ಸಂಚಾಲಕ ಡಿ. ರಮೇಶ ನಾಯಕ್ ಮೈರಾ ಮಾತನಾಡಿ ‘ಪ್ರತಿವರ್ಷ ಈ ಕಾರ್ಯಕ್ರಮವನ್ನು ಹಬ್ಬದ ರೀತಿಯಲ್ಲಿ ಸಮಾಜದ ಎಲ್ಲ ವರ್ಗದ ಜನರು ಸೇರಿ ಆಚರಿಸುತ್ತಿರುವುದು ಶ್ಲಾಘನೀಯ’ ಎಂದರು.
ವಿವಿಧ ಕ್ಷೇತ್ರಗಳ ಸಾಧಕರಾದ ಚೇರ್ಕಾಡಿ ಮಂಜುನಾಥ ಪ್ರಭು, ಕೋರ್ದೊಟ್ಟು ನಾರಾಯಣ ಪ್ರಭು, ಹೀರ್ತೋಟ್ಟು ಕೃಷ್ಣ ಪ್ರಭು, ಜಯಂತ ನಾಯಕ್, ಕಸ್ತೂರಿ ಮೋಹನ್ ಪ್ರಭು, ಪ್ರದೀಪ್ ನಾಯಕ್ ಬಲ್ಕತ್ಯಾರು , ಸುಜಾತ ಸಾಮಂತ್, ಬಜಪ್ಪಾಲು ವಾಸುದೇವ
ಭಟ್, ಗೋಪಾಲ ಸಾಮಂತ್ ಮೈರಾ, ಸುಶೀಲಾ ಗಣಪತಿ ನಾಯಕ್ ಪರ್ಕಳ, ಡಾ.ಸಂಗೀತ ಮುರಳೀಧರ ಪ್ರಭು, ಅಕ್ಷತಾ ನಾಯಕ್, ವಾಸುದೇವ ಪ್ರಭು ಮಾರಿಬೆಟ್ಟು, ಸಿಎ ರೋಹನ ಕೆ., ಯಶವಂತ ನಾಯಕ್ ಜ್ಞಾನೇಶ್ ಬೋಳಂಗಡಿ, ವಾಸುದೇವ ಭಟ್ ಇವರುಗಳನ್ನು ಸನ್ಮಾನಿಸಲಾಯಿತು.
ಪೂರ್ಣಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷ ವಿಜಯ ಶೆಣೈ ಕೊಡಂಗೆ, ದ.ಕ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘದ ಅಧ್ಯಕ್ಷ ಶ್ರೀನಿವಾಸ ಶೆಣೈ ಕೂಡಿಬೈಲು ಉಪಸ್ಥಿತರಿದ್ದರು. ದಯಾನಂದ ನಾಯಕ್ ಸ್ವಾಗತಿಸಿ, ಮುರಳೀಧರ ಪ್ರಭು ವಗ್ಗ ವಂದಿಸಿದರು. ಡಾ. ವಿಜಯಲಕ್ಷ್ಮಿ ನಾಯಕ್ ಕಾರ್ಯಕ್ರಮ ನಿರೂಪಿಸಿದರು.