ಶಿವಾನಂದ ಗಾಳಪ್ಪನವರಗೆ ರಾಜ್ಯಮಟ್ಟದ ಶ್ರೇಷ್ಠ ಸಾವಯವ ಕೃಷಿಕ ಪ್ರಶಸ್ತಿ

19 NRD award
Published on

ನರಗುಂದ:ತಾಲೂಕಿನ ವಾಸನ ಗ್ರಾಮದ ಶಿವಾನಂದ ಭೀಮಪ್ಪ ಗಾಳಪ್ಪನವರ (ತೆಗ್ಗಿನಮನಿ) ಅವರಿಗೆ ಭಾನುವಾರ ರಾಜ್ಯ ಮಟ್ಟದ ಶ್ರೇಷ್ಠ ಸಾವಯವ ಕೃಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಬೆಂಗಳೂರಿನ ನಯನ ಸಭಾಂಗಣದಲ್ಲಿ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಜರುಗಿದ ರಾಷ್ಟ್ರೀಯ ಭಾವೈಕ್ಯ ಕುರಿತು ವಿಚಾರ ಸಂಕಿರಣ ಹಾಗೂ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.


ಏಕತಾ ಪೌಂಡೇಷನ್ ಸಂಸ್ಥಾಪಕ ಬಸವ ಯೋಗಿ ಗುರೂಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಖ್ಯಾತ ಸಂಗೀತಗಾರರಾದ ಇಂದು ನಾಗರಾಜ, ಲಕ್ಷ್ಮೀ ನಾಗರಾಜ, ಅಬಕಾರಿ ಇಲಾಖೆ ಜಂಟಿ ಆಯುಕ್ತ ಬಸವಲಿಂಗಯ್ಯ ಹಿರೇಮಠ, ಆರ್‌ಟಿಒ ಜಂಟಿ ಆಯುಕ್ತೆ ಓಂಕಾರೇಶ್ವರಿ, ಸಹಾಯಕ ಕಾರ್ಯದರ್ಶಿ ಡಾ.ಕೆ. ಶಿವರಾಮಯ್ಯ, ಡಾ. ಅಶೋಕ ಚಲವಾದಿ, ಮಹೇಂದ್ರನಾಥ ಶರ್ಮಾ, ರಮೇಶಬಾಬು, ಸುಕನ್ಯಾ ಹಿರೇಮಠ, ಡಾ. ಅಶೋಕಕುಮಾರ, ಡಾ. ವೆಂಕಟಕೃಷ್ಣ, ಭರತನಾಟ್ಯ ಕಲಾವಿದೆ ಮಂಜು ಭಾರ್ಗವಿ, ಪದ್ಮಾ ನಾಗರಾಜ, ಪ್ರೊ. ಸಮತಾ ದೇಶಮಾನೆ, ಸುರೇಶ ನೀಡವಾಣಿ, ಕಲ್ಲಪ್ಪ ಮುದಿಯಪ್ಪನವರ, ವಾಸನ ಗ್ರಾಮದ ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net