

ಬದಿಯಡ್ಕ: ಜಿಲ್ಲಾ ಮಟ್ಟದ ಶಾಸ್ತ್ರ ಮೇಳದ ವೃತ್ತಿ ಪರಿಚಯ ವಿಭಾಗದಲ್ಲಿ ಹುರಿಹಗ್ಗದಿಂದ ಕಾಲೊರಸು ತಯಾರಿ ಸ್ಪರ್ಧೆಯಲ್ಲಿ ಎಲ್.ಪಿ. ವಿಭಾಗದಲ್ಲಿ ನಾಲ್ಕನೇ ತರಗತಿಯ ಕೃತಿ ದ್ವಿತೀಯ ಬಹುಮಾನ, ಯು.ಪಿ. ವಿಭಾಗದಲ್ಲಿ ಆರನೇ ತರಗತಿಯ ಕೀರ್ತನ ಕೆ.ಪಿ. ಪ್ರಥಮ ಬಹುಮಾನವನ್ನು ಪಡೆದಿರುತ್ತಾರೆ. ಇವರು ಕಲ್ಲಕಟ್ಟ ನಿವಾಸಿಗಳಾದ ಸುಜಿತ್ ಹಾಗೂ ಸಜಿತಾ ದಂಪತಿಗಳ ಮಕ್ಕಳು.