ಮುಂಜಾನೆದ್ದು ಕೆಲಸಕ್ಕೆ ಹೊರಟ್ಟಿದ್ದ ಅಕ್ಕ-ತಂಗಿ ದುರ್ಮರಣ!

death
Published on

ಬೆಂಗಳೂರು: ಬೆಳ್ಳಂಬೆಳಗ್ಗೆ ಮನೆಯಿಂದ ಕೆಲಸಕ್ಕೆ ಹೊರಟಿದ್ದ ಅಕ್ಕ-ತಂಗಿ ಮಾರ್ಗಮಧ್ಯೆ ದುರ್ಮರಣಕ್ಕೀಡಾದ ಘಟನೆ ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯ ತಿಂಡ್ಲು ಬಳಿ ಸಂಭವಿಸಿದೆ.

ತಿಂಡ್ಲು ಬಳಿಯ ದೊಡ್ಡ ಬೆಟ್ಟಹಳ್ಳಿ ನಿವಾಸಿಗಳಾದ ಮರಿಯಮ್ಮ ಮತ್ತು ಈಕೆಯ ಸಹೋದರಿ ಗೌರಮ್ಮ ಮೃತ ದುರ್ದೈವಿಗಳು. ಮರಿಯಮ್ಮರ ಪುತ್ರ ಶಿವಲಿಂಗ ಗಂಭೀರ ಗಾಯಗೊಂಡಿದ್ದಾರೆ. ಅಕ್ಕ ತಂಗಿ ಇಬ್ಬರೂ ವಿದ್ಯಾರಣ್ಯಪುರ ವಾರ್ಡ್​ನಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ತಾಯಿ ಮತ್ತು ಚಿಕ್ಕಮ್ಮರನ್ನು ಶಿವಲಿಂಗ ಬೈಕ್​ನಲ್ಲಿ ಕೆಲಸಕ್ಕೆ ಬಿಟ್ಟು ಬರಲು ಹೋಗುತ್ತಿದ್ದ ವೇಳೆ ಆಟೋ ಡಿಕ್ಕಿ ಹೊಡೆದಿದೆ. ಇದನ್ನೂ ಓದಿರಿ ತಾಯಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಬಾಲಕಿ ಆತ್ಮಹತ್ಯೆ?

ತಿಂಡ್ಲು ಬಳಿ ಆಟೋ ವ್ಹೀಲ್ ಆಕ್ಸಲ್ ಬ್ಲೇಡ್ ಕಟ್ಟಾಗಿ ನಡುರಸ್ತೆಗೆ ಬಂದಿದೆ. ಈ ವೇಳೆ ಎದುರು ಬರುತ್ತಿದ್ದ ಬೈಕ್​ಗೆ ಡಿಕ್ಕಿ ಹೊಡೆದಿದ್ದು, ಗೌರಮ್ಮ ಸ್ಥಳದಲ್ಲೇ ಸಾವನ್ನಪ್ಪಿದರು. ಗಂಭೀರ ಗಾಯಗೊಂಡಿದ್ದ ಮರಿಯಮ್ಮರನ್ನ ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಯಿತಾದರೂ ಮಾರ್ಗಮಧ್ಯೆ ಕೊನೆಯುಸಿರೆಳೆದರು.

ಮಗ ಶಿವಲಿಂಗನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋ ಚಾಲಕನಿಗೂ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಯಲಹಂಕ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net