ಮೋದಿ ತಲೆಗೆ ಹಾಕಿದ ಕಿರೀಟ ಮಾಡಿದವರ್ಯಾರು ಗೊತ್ತಾ..?

Modi-kirita
Published on

ಶಿರಸಿ: ನಗರದ ಗಂಡು ಮೆಟ್ಟಿನ ಕಲೆಯಾದ ಬೇಡರವೇಶದ ಕಿರಿಟವನ್ನು ಶಿರಸಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅರ್ಪಣೆಮಾಡಿದ್ದು ಬೇಡರವೇಶಕ್ಕೆ‌ ಸಂದ‌ಗೌರವವಾಗಿದೆ.

 ಬೇಡರವೇಶದ ಕಿರೀಟ ಪ್ರಧಾನಿಯವರ ಮೂಡಿಗೆರಿದಂತೆ ಜನರು ಚಪ್ಪಾಳೆ,ಸಿಟಿ ಹೊಡೆದು ವಿಜ್ರಂಬಿಸಿದರು. ಇದರೊಂದಿಗೆ ಬೇಡರವೇಶದ ಖ್ಯಾತಿ ಭಾರತದ ಅಡಿಯಿಂದ ಮುಡಿಯವರೆಗೂ ಮುಟ್ಟಿದಂತಾಗಿದೆ.

 ಈ ಬೇಡರ ವೇಶದ ಕಿರೀಟವನ್ನು ತಯಾರಿಸಿದವರು ಶಿರಸಿಯ ಮರಾಠಿಕೊಪ್ಪದ ನಿವಾಸಿ ಕೇಶವ ನಾಯ್ಕ. ಇವರು ವಿವಿಧ ಕಲೆಯ ಕಲಾವಿದರಾಗಿ ಶಿರಸಿಯಲ್ಲಷ್ಟೇ ಅಲ್ಲದೇ ಇಡೀ ಜಿಲ್ಲೆಯಲ್ಲಿ ಗುರುತಿಸಿಕೊಂಡವರು. ದೇಶದ ಉನ್ನತ ಸ್ಥಾನದ ಸ್ಥಾನದಲ್ಲಿರುವ ವ್ಯಕ್ತಿಯ ಮುಡಿಗೆ ಬೇಡರ ವೇಶದ ಕಿರೀಟ ತೊಡಿಸಬೇಕೆಂದರೆ ಆ ಕಿರೀಟ ಯಾರಿಂದ ಮಾಡಿಸಬೇಕೆನ್ನುವ ಚರ್ಚೆ ಬಿಜೆಪಿಯಲ್ಲಿ ಪ್ರಾರಂಭವಾಗಿತ್ತು. ಆಗ ನಗರಸಭೆ ಸದಸ್ಯ ರಾಘು ಶೆಟ್ಟಿಯವರ ಗಮನಕ್ಕೆ ತಟ್ಟನೆ ಹೊಳೆದಿದ್ದೆ ಇದೇ ಕೇಶವ ನಾಯ್ಕ.ಸಮಯದ ಅಭಾವವಿತ್ತು.ಇದರ ಜೊತೆಗೆ ಹೇಗೆ ಮಾಡಬೇಕೆಂದ ಚಾಲೆಂಜ್ ಕೇಶವ ನಾಯ್ಕವರಿಗಿತ್ತು. ಆದರೆ ಅದನ್ನು ಅವರು ಸುಲಭವಾಗಿ ಸಾದಿಸಿ ಬಿಟ್ಟರು.ಕಿರೀಟ ಅತ್ಯದ್ಬುತವಾಗಿ ಮೂಡಿ ಬಂದಿದ್ದು ಪ್ರಧಾನಿಯವರು ಕೂಡಾ ಕಿರೀಟವನ್ನು ಮುಟ್ಟಿ ಸಂತೋಷ ಪಟ್ಟರು.

ಇದನ್ನೂ ಓದಿ:

ನನಗೆ ಪ್ರಧಾನಿಯವರ ಬೇಡರ ವೇಶದ ಕಿರೀಟ ತೊಡಿಸಲು ಕಿರೀಟ ಮಾಡಿಕೊಡಬೇಕೆಂದಾಗ  ಒಮ್ಮೆ ಬೆಚ್ಚಿಬಿದ್ದೆ. ಅದು ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ಪ್ರಧಾನಿಯವರಿಗೆ.ಸಮಯ ಕೊಡಿ ಎಂದು ಕೇಳಿದ್ದೆ. ನಾನು ಮಾಡಿದ ಕಿರೀಟ ಪ್ರಧಾನಿ ನರೇಂದ್ರ ಮೋದಿಯವರು ಧರಿಸಿದ್ದು ನನ್ನ ಜೀವನ ಸಾರ್ಥಕವಾದಂತಾಗಿದೆ. ಕೇಶವ ನಾಯ್ಕ,ಕಲಾವಿದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net