ಬ್ಲ್ಯಾಕ್‌ಮೇಲರ್‌ಗಳಿಗೆ ಶಿರಸಿ ಪೊಲೀಸರ ಅಭಯ..?

Blackmailers.
Published on

ಕಾರವಾರ: ಬ್ಲ್ಯಾಕ್‌ ಮೇಲ್‌, ವಂಚನೆ ಪ್ರಕರಣದಲ್ಲಿ ಭಾಗಿಯಾದ ಶಿರಸಿಯ ನಕಲಿ ಪತ್ರಕರ್ತರಾದ ರವೀಶ ಹೆಗಡೆ, ಗಣೇಶ ಆಚಾರಿ ಹಾಗೂ ಆರ್‌ಟಿಐ ಕಾರ್ಯಕರ್ತ ಓಂ ಹೆಗಡೆ ಅವರನ್ನು ಪೊಲೀಸ್ ಅಧಿಕಾರಿಗಳು ರಕ್ಷಿಸುವ ಯತ್ನ ನಡೆಸಿದ್ದಾರೆ ಎಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಷ್ಟ್ರೀಯ ಸಂಯೋಜಕ ನಾಗರಾಜ ನಾರ್ವೇಕರ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಪೊಲೀಸರು ಆರೋಪಿಗಳನ್ನು ರಕ್ಷಣೆಗೆ ಯತ್ನಿಸುತ್ತಿದ್ದಾರೆ ಎಂಬುದನ್ನು ಮೇಲ್ನೋಟಕ್ಕೆ ಸಾಕ್ಷೀಕರಿಸುವ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದರು. ಶಿರಸಿ ಜ್ಯುವೆಲರಿ ಅಂಗಡಿ ಮಾಲೀಕ ಪ್ರಕಾಶ ಪಾಲನಕರ್ ಅವರ ಪುತ್ರ ಪ್ರೀತಂ ಪಾಲನಕರ್ (36)ಮೇ 15 ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ನಕಲಿ ಪತ್ರಕರ್ತರಿಬ್ಬರು ಹಾಗೂ ಓಂ ಹೆಗಡೆ ಬ್ಲ್ಯಾಕ್‌ ಮೇಲ್ ಮಾಡಿ, ಹಣಕ್ಕಾಗಿ ಪೀಡಿಸುತ್ತಿರುವುದೇ ಪ್ರೀತಂ ಪಾಲನಕರ್ ಅವರ ಆತ್ಮಹತ್ಯೆಗೆ ಕಾರಣ ಎಂಬುದು ಅವರ ಮನೆಯವರಿಂದ ತಿಳಿದು ಬಂತು.
ಪ್ರೀತಮ್ ಆತ್ಮಹತ್ಯೆ ಮಾಡಿಕೊಂಡ ದಿನ ಬ್ಲ್ಯಾಕ್‌ ಮೇಲರ್‌ಗಳ ವಿರುದ್ಧ ದೂರು ನೀಡಲು ಹೋದರೆ, ಪೊಲೀಸರು ಅದನ್ನು ಸ್ವೀಕರಿಸಲಿಲ್ಲ ಎನ್ನಲಾಗಿದೆ. ನಂತರ ನಾನು ಹಾಗೂ ಶಾಸಕ ಭೀಮಣ್ಣ ನಾಯ್ಕ ಸ್ವತಃ ಮೃತರ ಮನೆಗೆ ತೆರಳಿ ಧೈರ್ಯ ತುಂಬಿದೆವು. ಸ್ವತಃ ನಿಂತು ಅವರ ವಿರುದ್ಧ ಶಿರಸಿ ಹೊಸ ಮಾರುಕಟ್ಟೆ ಠಾಣೆಯಲ್ಲಿ ಮೃತರ ಸಂಬಂಧಿಕರಿಂದ ದೂರು ಕೊಡಿಸಿದ್ದೇನೆ. ಎಫ್‌ಐಆರ್ ಕೂಡ ದಾಖಲಾಗಿದೆ.

Palankar

ಆದರೆ, ಪೊಲೀಸರು ಆರೋಪಿಗಳನ್ನು ರಕ್ಷಿಸುವ ಕಾರ್ಯ ಮಾಡುತ್ತಿದ್ದಾರೆ. ಘಟನೆ ನಡೆದು 15 ದಿನ ಕಳೆದರೂ ಆರೋಪಿಗಳನ್ನು ಬಂಧಿಸಿಲ್ಲ. ಮೇ 25 ರಂದು ಶಿರಸಿ ಹೊಸ ಮಾಟುಕಟ್ಟೆ ಪೊಲೀಸರು ಮೃತರ ಪತ್ನಿ ಸಹನಾ, ಅವರ ತಾಯಿ ಗೀತಾ ರಾಯ್ಕರ್, ತಂದೆ ಜಗದೀಶ ರಾಯ್ಕರ್ ಅವರ ಹೇಳಿಕೆಯನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡು ಹೋದರು. ಆದರೆ, ಮರುದಿನ ಹೊಸ ಮಾರುಕಟ್ಟೆ ಠಾಣೆಯ ಪಿಎಸ್‌ಐ ರತ್ನಾ ಕುರಿ ಅವರು ಬೇರೆಯದೇ ಹೇಳಿಕೆಯೊಂದನ್ನು ಖಾಲಿ ಹಾಳೆಯ ಮೇಲೆ ಬರೆದು, ಸ್ವತಃ ಸಹಿ ಮಾಡಿದ್ದು, ಮೃತರ ಪತ್ನಿ, ಹಾಗೂ ಸಂಬಂಧಿಕರ ಬಳಿ ಸಹಿ ಪಡೆಯಲು ಬಂದಿದ್ದರು. `ಮೃತ ಪ್ರೀತಂ ಪಾಲನಕರ್ ಅವರನ್ನು ಯಾರೂ ಬೆದರಿಸಿಲ್ಲ. ತಮ್ಮ ಮಗಳ ಅನಾರೋಗ್ಯವನ್ನು ಮನಸ್ಸಿಗೆ ಹಚ್ಚಿಕೊಂಡು ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ' ಎಂದು ಅರ್ಥ ಬರುವ ಹೇಳಿಕೆಗೆ ಸಹನಾ ಹಾಗೂ ಇತರರ ಬಳಿ ಸಹಿ ಮಾಡಿಸುವ ಪ್ರಯತ್ನವನ್ನು ಪೊಲೀಸರು ನಡೆಸಿದರು. ಆದರೆ, ಸಹನಾ ಸಹಿ ಮಾಡಿಲ್ಲ.
ಪೊಲೀಸರ ಈ ವರ್ತನೆಯಿಂದ ಬೆರಗಾಗಿ ನಾನು ಎಸ್‌ಪಿ ಅವರಿಗೆ, ಪಶ್ಚಿಮ ವಲಯ ಐಜಿಪಿ, ಡಿಜಿಪಿ ಹಾಗೂ ಗೃಹ ಸಚಿವರಿಗೂ ದೂರು ನೀಡಿದ್ದು, ತನಿಖಾಧಿಕಾರಿ ಪಿಎಸ್‌ಐ ರತ್ನಾ ಕುರಿ ಅವರನ್ನು ಬದಲು ಮಾಡುವಂತೆ ಒತ್ತಾಯ ಮಾಡಿದ್ದೇನೆ. ತನಿಖಾಧಿಕಾರಿಯನ್ನು ಬದಲು ಮಾಡಿದ್ದು, ಬಿಟ್ಟು ಅವರ ಮೇಲೆ ಯಾವುದೇ ಕ್ರಮ ವಹಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮೃತರ ಸಹೋದರ ಪವನ್ ಪ್ರಕಾಶ ಪಾಲನಕರ್ ಇದ್ದರು.

ಶಿರಸಿಯಲ್ಲಿ ಪೊಲೀಸ್ ವ್ಯವಸ್ಥೆ ಹದಗೆಟ್ಟಿದೆ. ನಮ್ಮ ಸರ್ಕಾರಕ್ಕೆ, ಸಚಿವರಿಗೆ, ಶಾಸಕರ ಹೆಸರಿಗೆ ಕುಂದು ಬರುವ ರೀತಿಯಲ್ಲಿ ಪೊಲೀಸ್ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಅಪರಾಽಗಳನ್ನು ರಕ್ಷಿಸುವ ಕಾರ್ಯವನ್ನು ಪೊಲೀಸರು ಮಾಡುತ್ತಿದ್ದು, ಅಂಥ ಅಽಕಾರಿಗಳ ವಿರುದ್ಧ ಕ್ರಮ ವಹಿಸಬೇಕು.ನಾಗರಾಜ ನಾರ್ವೇಕರ್ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಷ್ಟ್ರೀಯ ಸಂಯೋಜಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net