More

    ಕೆಡಿಸಿಸಿ ಬ್ಯಾಂಕ್‌ ಕಾರ್‌ ಲೋನ್‌ ವಂಚನೆ-ಮೂವರು ವಶಕ್ಕೆ

    ಸಿದ್ದಾಪುರ: ವೆಬ್ ಪತ್ರಕರ್ತ ರವೀಶ ಹೆಗಡೆ ಹಾಗೂ ಆತನ ಸಹಚರರ ವಿರುದ್ಧ ಮತ್ತೊಂದು ವಂಚನೆ ದೂರು ಸಿದ್ದಾಪುರ ಠಾಣೆಯಲ್ಲಿ ದಾಖಲಾಗಿದೆ.
    ನಕಲಿ ದಾಖಲೆ ನೀಡಿ ಕಾರು ಖರೀದಿ ಸಾಲ ಪಡೆದ ಬಗ್ಗೆ ಕೆಡಿಸಿಸಿ ಬ್ಯಾಂಕ್ ಕಾನಸೂರು ಶಾಖೆಯ ವ್ಯವಸ್ಥಾಪಕ ಗೋಪಾಲಪ್ಪ ಕಿಟ್ಟಪ್ಪ ಅವರು ಮೂಲ ಸಾಲಗಾರ ನೆಗ್ಗು ಗೋಳಿಯ ಮಣಿಕಂಠ ಚಂದ್ರಶೇಖರ ನಾಯ್ಕ ಹಾಗೂ ಆತನಿಗೆ ಜಾಮೀನು ನೀಡಿದ ಅಜ್ಜಿಬಳ್ ಸೊಂಡ್ಲಬೈಲ್‌ನ ರವೀಶ ವೆಂಕಟರಮಣ ಹೆಗಡೆ ಹಾಗೂ ಶಿರಸಿ ನಗರದ ಬಸವರಾಜ ಯಳವತ್ತಿ ವಿರುದ್ಧ ದೂರು ನೀಡಿದ್ದಾರೆ.
    ಈ ಹಿಂದೆ ಕೆಡಿಸಿಸಿ ಬ್ಯಾಂಕ್ ಶಿರಸಿ ನಗರ ಶಾಖೆಯಿಂದ ದೂರು ದಾಖಲಾಗಿತ್ತು. ರವೀಶ ಹೆಗಡೆ ಮತ್ತು ತಂಡದವರು ಒಂದೇ ಕಾರನ್ನು ತೋರಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೆಡಿಸಿಸಿ ಹಾಗೂ ಇತರ ಬ್ಯಾಂಕ್‌ಗಳಲ್ಲಿ ಒಟ್ಟು 29 ಕೋಟ್ಯಂತರ ರೂ. ಸಾಲ ಮಾಡಿದ್ದಾರೆ ಎನ್ನಲಾಗಿದ್ದು, ಇನ್ನಷ್ಟು ದೂರುಗಳು ದಾಖಲಾಗಬೇಕಿವೆ.

    ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಸಿ ಶಹರ ಠಾಣೆ ಪೊಲೀಸರು ಸಿದ್ದರಾಮೇಶ ಅಶೋಕ ಮೆಣಸಿನಕಾಯಿ, ದಶನ ಅಣ್ಣಪ್ಪ ನಾಯ್ಕ ಹಾಗೂ ಗಣಪತಿ ಮಂಜುನಾಥ ಶೇಟ್‌ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ. ಪ್ರಮುಖ ಆರೋಪಿಗಳಾದ ರವೀಶ ಹೆಗಡೆ, ಮಣಿಕಂಠ ನಾಯ್ಕ ಬಂಧನಕ್ಕೆ ಪೊಲೀಸ್‌ ತಂಡ ಬಲೆ ಬೀಸಿದೆ.
    ಹೇಗೆ ವಂಚನೆ..?
    ಹುಂಡೈ ಕ್ರೆಟಾ ಕಾರು ಖರೀದಿಗೆ ಸಾಲ ನೀಡುವುದಾಗಿ ಕೆಡಿಸಿಸಿ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ ಮಣಿಕಂಠ ನಾಯ್ಕ, ಹುಬ್ಬಳ್ಳಿಯ ಶಿರೂರು ರೋಡ್‌ನ ಕೆನರಾ ಮೋಟರ್ಸ್ ಪ್ರೈ ಲಿ ನೀಡಿದ 15.60 ಲಕ್ಷ ರೂ.ಗಳ ದರ ಪತ್ರ(ಕೊಟೇಶನ್) ಸಲ್ಲಿಸಿದ್ದ. ಬ್ಯಾಂಕಿನ ನಿಯಮದಂತೆ ಶೇ. 85 ರಷ್ಟು ಮಾತ್ರ ಸಾಲ ನೀಡುವುದಾಗಿ ತಿಳಿಸಲಾಗಿತ್ತು. ಅದರಂತೆ ದಾಖಲೆ ಪಡೆದು, 10.60 ಲಕ್ಷ ರೂ.ಗಳನ್ನು ದರ ಪಟ್ಟಿಯಲ್ಲಿ ನಮೂದಿಸಿದ ಕೆನರಾ ಮೋಟರ್ಸ್‌ ಐಸಿಐಸಿಐ ಬ್ಯಾಂಕ್ ಖಾತೆಗೆ ಆರ್‌ಟಿಜಿಎಸ್ ಮೂಲಕ ಹಣ ಹಸ್ತಾಂತರಿಸಲಾಗಿತ್ತು.
    ಆತ ಕಾರು ಖರೀದಿಗೂ ಮುಂಚೆ ಶೋರೂಂಗೆ ತುಂಬಿದ ಮಾರ್ಜಿನ್ ಮೊತ್ತ 5 ಲಕ್ಷ ರೂ.ಗಳ ವೋಚರ್, ಕಾರಿನ ಟ್ಯಾಕ್ಸ ಇನ್ವೈಸ್, ಶಿರಸಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಯವರು ನೀಡುವ ವಾಹನಗಳ ಬಿ ಅಬ್ಸ್ಟ್ರಾಕ್ಟ್ ಹಾಗೂ ಕಾಂಪ್ರಹೆನ್ಸಿವ್ ವಿಮೆ ಮಾಡಿದ ಬಗ್ಗೆ ದಾಖಲೆ ಮುಂತಾದವುಗಳನ್ನು ಬ್ಯಾಂಕಿಗೆ ಸಲ್ಲಿಸಿದ್ದ. ಅಲ್ಲದೆ, ಕಪ್ಪು ಬಣ್ಣದ ಹುಂಡೈ ಕ್ರೇಟಾ ಕಾರನ್ನು ಬ್ಯಾಂಕಿಗೆ ತೋರಿಸಿ, ಸಾಲದ ಶರತ್ತಿನಂತೆ ಕಾರಿನ ಒಂದು ಕೀಲಿಯನ್ನು ಬ್ಯಾಂಕ್‌ಗೆ ಹಸ್ತಾಂತಿಸಿದ್ದ. ಸಾಲದ ಕಂತುಗಳನ್ನೂ ತುಂಬುತ್ತ ಬಂದಿದ್ದ. ಆದರೆ, ಯಲ್ಲಾಪುರ ಮಂಚಿಕೆರಿ ಶಾಖೆಯಲ್ಲಿ ಇದೇ ಸಾಲಗಾರ ನೀಡಿದ ದಾಖಲೆ ನಕಲಿ ಎಂದು ಗೊತ್ತಾದ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಇಲ್ಲಿ ನೀಡಿದ ವಾಹನ ಸಂಖ್ಯೆ, ಎಲ್ಲ ದಾಖಲೆಗಳು ನಕಲಿ ಎಂಬುದು ಸಾಬೀತಾಗಿದ್ದು, ಬ್ಯಾಂಕ್ ಅಧಿಕಾರಿಗಳು ದಂಗಾಗಿದ್ದಾರೆ. ಆರೋಪಿಗಳು ಪದಾರಿಯಾಗಿದ್ದಾರೆ.

    https://www.vijayavani.net/new-administrater-to-tss

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts