ಶಿಕ್ಷಕರಿಗಾಗಿ ಚುಟುಕು ಕ್ರಿಕೆಟ್ ಪಂದ್ಯಾವಳಿ

Published on

ಸಿರಿಗೇರಿ: ಶಿಕ್ಷಕರ ದಿನಾಚರಣೆ ನಿಮಿತ್ತ ವಿವಿಧ ಸಂಘಟನೆಗಳಿಂದ ಆಯೋಜನೆಗೊಂಡ ಸಿರಿಗೇರಿ ಮತ್ತು ಎಂ.ಸೂಗುರು ಕ್ಲಸ್ಟರ್ ಮಟ್ಟದ ಶಿಕ್ಷಕರಿಗೆ ಚುಟುಕು ಕ್ರಿಕೆಟ್

ಪಂದ್ಯಾವಳಿಯನ್ನು ಪಿಎಸ್‌ಐ ಎಚ್.ಸದ್ದಾಂ ಹುಸೇನ್ ಟಾಸ್ ಹಾಕಿ ಚಾಲನೆ ನೀಡಿದರು.

ಟಾಸ್ ಗೆದ್ದ ಎಂ.ಸೂಗುರು ಶಿಕ್ಷಕರ ತಂಡ, ಬ್ಯಾಟಿಂಗ್‌ನ್ನು ಆಯ್ಕೆ ಮಾಡಿ. ನಿಗದಿತ 10 ಓವರ್‌ಗಳಲ್ಲಿ 133 ರನ್‌ಗಳನ್ನು ಗಳಿಸಿ 3 ವಿಕೆಟ್ ಕಳೆದುಕೊಂಡಿತು. ತಂಡದ ಪರ ತಿಪ್ಪೇಸ್ವಾಮಿ ಶತಕ ಬಾರಿಸಿ ಪಂದ್ಯ ಶ್ರೇಷ್ಠರಾದರು.

ನಂತರ ಈ ಮೊತ್ತವನ್ನು ಕಲೆ ಹಾಕುವಲ್ಲಿ ಸಿರಿಗೇರಿ ವಲಯದ ಶಿಕ್ಷಕರ ತಂಡ ವಿಫಲವಾಯಿತು. ಕೇವಲ 89 ರನ್ 4 ವಿಕೆಟ್ ಕಳೆದುಕೊಂಡು ಸೋಲನ್ನೊಪ್ಪಿಕೊಂಡಿತು. ಅತ್ಯುತ್ತಮ ಬ್ಯಾಟಿಂಗ್ ಕೊಳ್ಳಿ ನಾಗರಾಜ್,ಅತ್ಯುತ್ತಮ ಬೌಲರ್ ಚಿದಾನಂದಪ್ಪ ಪ್ರಶಸ್ತಿ ಪಡೆದರು.

ಕಾರ್ಯಕ್ರಮದ ಆಯೋಜಕರಾದ ವಕೀಲ ರಾಮ್‌ಬಾಬು, ಬಿಆರ್‌ಸಿ ಕೋ ಅರ್ಡಿನೇಟರ್ ಎಸ್.ಯೋಗನಂದಯ್ಯ,ಇಸಿಒ ಎಚ್.ಪಂಪಾಪತಿ, ವಿ.ಹನುಮೇಶ್, ವೀರೇಶ್, ಹಳ್ಳಿಮರದ ನಾಗರಾಜ್, ಶಿವಾಜಿ ರಾವ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net