ತೆಂಕುತಿಟ್ಟು ಯಕ್ಷಮಾರ್ಗ ಪ್ರಾತ್ಯಕ್ಷಿಕೆ ಶಿಬಿರ ಸಂಪನ್ನ

28-yakshagana
Published on

ಕಾಸರಗೋಡು: ಬೆಂಗಳೂರಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಾಯೋಜಕತ್ವ ಹಾಗೂ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗದೊಂದಿಗೆ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ನಡೆದ ಎರಡು ದಿನಗಳ ತೆಂಕುತಿಟ್ಟು ಯಕ್ಷ ಮಾರ್ಗ-ಶಿಬಿರ-ಯಕ್ಷಗಾನ ಪ್ರದರ್ಶನ ಸಮಾರೋಪಗೊಂಡಿತು.

ತೆಂಕುತಿಟ್ಟು ಶಾಸ್ತ್ರೀಯ ನಾಟ್ಯ ಗುರು ಕರ್ಗಲ್ಲು ವಿಶ್ವೇಶ್ವರ ಭಟ್ ಅವರಿಂದ ಎರಡು ದಿನಗಳ ಕಾಲ ನಡೆದ ಪ್ರಾತ್ಯಕ್ಷಿಕೆಯಲ್ಲಿ 50ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿ ಯಕ್ಷಗಾನದ ಸಭಾ ವಂದನೆ, ಯಕ್ಷಗಾನ ನಾಟ್ಯ, ಮಾತುಗಾರಿಕೆ, ಹೆಜ್ಜೆಗಾರಿಕೆ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು.

ಯಕ್ಷಗಾನ ವಿದ್ವಾಂಸ, ಪ್ರಸಂಗಕರ್ತ ಶ್ರೀಧರ ಡಿ.ಎಸ್ ಅವರಿಗೆ ಸಿರಿಬಾಗಿಲು ವೆಂಕಪ್ಪಯ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸದಸ್ಯತ್ವ ನೋಂದಾವಣಿ ಅಭಿಯಾನದ ಅಂಗವಾಗಿ ಎಚ್.ಕೃಷ್ಣ ಭಟ್ ಮಂಗಳೂರು ಅವರಿಗೆ ಪೋಷಕ ಗೌರವ ನೀಡಲಾಯಿತು. ಸಮಾರೋಪ ಸಮಾರಂಭದಲ್ಲಿ ಶಾಸಕ ಎನ್.ಎ .ನೆಲ್ಲಿಕುನ್ನು ಮುಖ್ಯ ಅತಿಥಿಯಾಗಿದ್ದರು.

ಯಕ್ಷಗಾನ ಅಕಾಡೆಮಿ ಸದಸ್ಯರಾದ ಸತೀಶ ಅಡಪ ಸಂಕಬೈಲು ಹಾಗೂ ಕೃಷ್ಣಪ್ಪ ಕೀನ್ಯಾ ಉಪಸ್ಥಿತರಿದ್ದರು. ಜಗದೀಶ್ ಕೆ.ಕೂಡ್ಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಅಂಗವಾಗಿ ಯಕ್ಷ ಬಳಗ ಹೊಸಂಗಡಿ ಬಳಗದಿಂದ ಶರಸೇತುಬಂಧನ ಯಕ್ಷಗಾನ ತಾಳಮದ್ದಳೆ, ಸಿರಿಬಾಗಿಲು ಪ್ರತಿಷ್ಠಾನದ ನೇತೃತ್ವದಲ್ಲಿ ಪ್ರಸಿದ್ಧ ಕಲಾವಿದರಿಂದ ಭಕ್ತ ಪ್ರಹ್ಲಾದ ಯಕ್ಷಗಾನ ಬಯಲಾಟ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net