

ಮದ್ದೂರು: ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟದಲ್ಲಿ ಪಸರಿಸಿದ ಮಹಾನ್ ಮೇದಾವಿ ಸರ್ ಎಂ.ವಿಶ್ವೇಶ್ವರಯ್ಯ ಅವರ ಸಾಧನೆ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ವಿ.ಸಿ.ಉಮಾಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ವಳಗೆರೆಹಳ್ಳಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸರ್ ಎಂ.ವಿಶ್ವೇಶ್ವರಯ್ಯ ಅವರ 164ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೈಗಾರಿಕೆ, ಅಣೆಕಟ್ಟೆ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದೇಶವನ್ನು ಪ್ರಗತಿ ಪತದತ್ತ ಮುನ್ನಡೆಸಿದ ಕೀರ್ತಿ ವಿಶ್ವೇಶ್ವರಯ್ಯ ಅವರಿಗೆ ಸಲ್ಲುತ್ತದೆ ಎಂದರು.
ಶ್ರೇಷ್ಠ ಇಂಜಿನಿಯರ್ ಆಗಿದ್ದ ಸರ್ ಎಂವಿ ಅವರು ಸರಳ ಜೀವನ ಮತ್ತು ಉನ್ನತ ಚಿಂತನೆಯಲ್ಲಿ ನಂಬಿಕೆ ಇಟ್ಟಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯ ಫಲವಾಗಿ ಕನ್ನಂಬಾಡಿ ಬಳಿ ಅಣೆಕಟ್ಟು ನಿರ್ಮಾಣವಾಯಿತು. ಜಲಾಶಯ ನಿರ್ಮಿಸಿದ್ದು ನಮ್ಮ ನಾಡಿನ ಹಿತಕ್ಕಾಗಿಯೇ ಹೊರತು ತಮಿಳುನಾಡಿನ ಹಿತಕ್ಕಲ್ಲ ಎಂದು ಹೇಳಿದರು.
ಉಪನ್ಯಾಸಕ ವಿ.ಎನ್.ಗಿರೀಶ್, ಗ್ರಾಪಂ ಅಧ್ಯಕ್ಷೆ ವಸಂತಾ, ಸದಸ್ಯ ಎಸ್.ದಯಾನಂದ, ಎಂಪಿಸಿಎಶ್ ನಿರ್ದೇಶಕ ವಿ.ಕೆ.ಶ್ರೀನಿವಾಸ, ಕಕಜವೇ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸುಧಾ, ಮುಖಂಡರಾದ ಕೊಣಿಯನ್ ರಾಜಣ್ಣ, ವಿ.ಆರ್.ಲೋಕೇಶ್, ಜಗ್ಗಿ ಸೀನಪ್ಪ, ರಮೇಶ್, ವಿ.ಆರ್.ಸತೀಶ್, ವಿ.ಕೆ.ಸಂಪತ್ತು, ವಿ.ಈ.ಕೃಷ್ಣ, ಗೌತಮ್, ಸೀನಪ್ಪ, ನಾಗ ಇದ್ದರು.