ಪಠ್ಯೇತರ ಚಟುವಟಿಕೆಯಿಂದ ಆತ್ಮವಿಶ್ವಾಸ

compitition
ರೇಡಿಯೋ ಕುಂದಾಪ್ರ 89.6 ಹಾಗೂ ಕುಂದಪ್ರಭ ಸಂಸ್ಥೆ ಆಯೋಜಿಸಿದ ಕುಂದಾಪ್ರ ಕನ್ನಡ ಸ್ವರಚಿತ ಕವನ ವಾಚನ, ಹಾಡುಗಾರಿಕೆ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ವಿದ್ಯಾರ್ಥಿಗಳಿಂದು ಶಾಲಾ ಕಾಲೇಜುಗಳಲ್ಲಿ ಶೈಕ್ಷಣಿಕ ಒತ್ತಡ ಇರುತ್ತದೆ. ಆದರೆ ಪಾಠದ ಜತೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಂಡರೆ ಆತ್ಮವಿಶ್ವಾಸ ಬೆಳೆಯುತ್ತದೆ. ಹೆಚ್ಚು ಸ್ಪರ್ಧೆಗಳಲ್ಲಿ ಪಾಲ್ಗೊಂಡು ಅನುಭವದ ವಿಕಾಸ ಮಾಡಿಕೊಳ್ಳಬೇಕು ಎಂದು ವಿದ್ಯುತ್ ಗುತ್ತಿಗೆದಾರ ಕೆ.ಆರ್. ನಾಯ್ಕ ಹೇಳಿದರು.

ರೇಡಿಯೋ ಕುಂದಾಪ್ರ 89.6 ಹಾಗೂ ಕುಂದಪ್ರಭ ಸಂಸ್ಥೆ ಆಯೋಜಿಸಿದ ಕುಂದಾಪ್ರ ಕನ್ನಡ ಸ್ವರಚಿತ ಕವನ ವಾಚನ, ಹಾಡುಗಾರಿಕೆ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ ಪದವಿ, ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು.
ಭಂಡಾರ್‌ಕಾರ್ಸ್‌ ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರಾಚಾರಿ ಅಧ್ಯಕ್ಷತೆ ವಹಿಸಿದ್ದರು. ವಿಶ್ವಸ್ಥ ಕೆ.ಶಾಂತಾರಾಮ ಪ್ರಭು ಬಹುಮಾನ ವಿತರಿಸಿ ಶುಭ ಹಾರೈಸಿದರು. ರಾಜೇಂದ್ರ ತೋಳಾರ್ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು. ಭಂಡಾರ್‌ಕಾರ್ಸ್‌ ಪ.ಪೂ. ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ. ಗೊಂಡ ವಿದ್ಯಾರ್ಥಿಗಳಿಗೆ ಮಾರ್ಗದರ್ಶನಗೈದರು. ಪತ್ರಿಕೋದ್ಯಮ ವಿಭಾಗದ ಸುಮಲತಾ ಉಪಸ್ಥಿತರಿದ್ದರು. ಯುಕ್ತಾ ಹೊಳ್ಳ ಕುಂದಾಪ್ರ ಕನ್ನಡ ಹಾಡು ಹಾಡಿದರು. ಯು.ಎಸ್. ಶೆಣೈ ಪ್ರಸ್ತಾವನೆಗೈದರು. ಹಂದಕುಂದ ಸೋಮಶೇಖರ ಶೆಟ್ಟಿ ವಂದಿಸಿದರು. ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net