ಹೆಲಿಪ್ಯಾಡ್ ಪ್ರವೇಶ ನಿರಾಕರಿಸಿದ ತಾಲೂಕು ಆಡಳಿತ ವಿರುದ್ಧ ಶಾಸಕರು ಗರಂ

14042021 Sindhanoor MLAs visit
Published on

ಸಿಂಧನೂರು: ನಗರದ ಕುಷ್ಟಗಿ ರಸ್ತೆ ಮಾರ್ಗದ ಸರ್ಕಿಟ್‌ಹೌಸ್ ಬಳಿ ಇರುವ ಹೆಲಿಪ್ಯಾಡ್‌ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಆಗಮನ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳುತ್ತಿದ್ದ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಪುರನ್ನು 10 ನಿಮಿಷಕಾಲ ತಡೆದಿದ್ದರಿಂದ ತಾಲೂಕು ಆಡಳಿತದ ವಿರುದ್ಧ ಶಾಸಕರು ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.

ಹೆಲಿಪ್ಯಾಡ್‌ಗೆ 11 ಗಂಟೆಗೆ ಡಿಕೆ ಶಿವಕುಮಾರ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸ್ವಾಗತ ಮಾಡಿಕೊಳ್ಳಲು ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ, ಕಾಂಗ್ರೆಸ್ ಮುಖಂಡರು ಸ್ಥಳದಲ್ಲಿದ್ದರು. 11.15 ಕ್ಕೆ ಹೆಲಿಪ್ಯಾಡ ಸ್ಥಳಕ್ಕೆ ಬರುತ್ತಿದ್ದಂತೆಯೆ ಪೊಲೀಸರು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಪುರನ್ನು ಕುಷ್ಟಗಿ ಮುಖ್ಯರಸ್ತೆಯಲ್ಲೇ ತಡೆದರು.

ಜತೆಗೆ ಶಾಸಕರೆಂದು ಗೊತ್ತಿದ್ದರೂ ತಹಸಿಲ್ ಕಚೇರಿ ಶಿರಸ್ತೇದಾರ ಅಂಬಾದಾಸ್ ಕೊಪ್ಪಳ ಶಾಸಕರ ವಾಹನವನ್ನು ತಡೆದಿದ್ದರಿಂದ ಸಿಟ್ಟಿಗೆದ್ದ ಶಾಸಕರು, ಜನಪ್ರತಿನಿಧಿಗಳಿಗೆ ಗೌರವ ಕೊಡುವುದು ಕಲಿತುಕೊಳ್ಳಿ, ನಮ್ಮ ನಾಯಕರನ್ನು ಸ್ವಾಗತಿಸುವ ಹಕ್ಕು ನಮಗಿಲ್ಲವೇ, ನಿಮಗೆ ತಿಳಿದಂತೆ ನಡೆದುಕೊಳ್ಳುವಿರಾ ಎಂದು ಪ್ರಶ್ನಿಸಿದರು. ತಹಸಿಲ್ ಕವಿತಾ ಸಮಜಾಯಿಸಿ ನೀಡಿ, ಆಯ್ತು ನಮ್ಮ ಅಧಿಕಾರಿಗಳಿಗೆ ಹೇಳುತ್ತೇನೆ ಹೆಲಿಪ್ಯಾಡ್‌ಗೆ ಹೋಗಿ ಎಂದು ಕಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net