

ನಂಜನಗೂಡು: ಮೈಸೂರಿನ ಯುವರಾಜ ಕಾಲೇಜಿನ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ 2024-25ನೇ ಸಾಲಿನ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಆರ್.ಸಿಂಚನಾ ಕರಾಟೆ ಮತ್ತು ಬಾಕ್ಸಿಂಗ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಮೈಸೂರಿನ ನಾರಾಯಣ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾದ ಆರ್.ಸಿಂಚನಾ ನಂಜನಗೂಡು ಪಟ್ಟಣದ ನಂಜುಂಡೇಶ್ವರ ಟೌನ್‌ಶಿಪ್ ಕಾಲನಿಯ ರಾಜೇಶ್ ಮತ್ತು ಭವ್ಯಾ ದಂಪತಿ ಪುತ್ರಿ. ಮಾಸ್ಟರ್ ಸಿಹಾನ್ ರಾಜೇಶ್ ತರಬೇತಿ ನೀಡಿದ್ದರು.