ಪ್ರಾಮಾಣಿಕತೆಯಿಂದ ಸಂಸ್ಥೆ ಬೆಳವಣಿಗೆ ಸಾಧ್ಯ

LIC
ರಾಯಚೂರಿನಲ್ಲಿ ಅಖಿಲ ಭಾರತ ವಿಮಾ ನೌಕರರ ಸಂಘದ ಸಂಸ್ಥಾಪನಾ ದಿನಾಚರಣೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ರವಿ ಮಾತನಾಡಿದರು. ಸಂಘದ ಅಧ್ಯಕ್ಷ ಎಂ.ಶರಣಗೌಡ, ಕ್ಲಾಸ್-1 ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಗುರುರಾಜ, ಅಭಿವೃದ್ಧಿ ಅಧಿಕಾರಿಗಳ ಸಂಘದ ಪ್ರತಿನಿಧಿಗಳಾದ ಡಿ.ಬಿ.ಕಟ್ಟಿಮನಿ, ಪಿ.ಕೃಷ್ಣಾರೆಡ್ಡಿ ಇದ್ದರು.
Published on

ರಾಯಚೂರು: ಘಟನೆ ಸದಸ್ಯರ ಸಹಕಾರದಿಂದ ರಾಯಚೂರು ವಿಭಾಗದ ಪಾಲಸಿ ಬೆಳವಣಿಗೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಎಲ್‌ಐಸಿ ವಿಭಾಗೀಯ ಮಾರುಕಟ್ಟೆ ಪ್ರಬಂಧಕ ಎಚ್.ಸುಖೇಶ್ ಹೇಳಿದರು.

ನಗರದ ಎಲ್‌ಐಸಿ ವಿಭಾಗೀಯ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಅಖಿಲ ಭಾರತ ವಿಮಾ ನೌಕರರ ಸಂಘದ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಸಿಬ್ಬಂದಿ ಸಂಸ್ಥೆಯ ಏಳಿಗೆಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.

ಸಂಘದ ಅಧ್ಯಕ್ಷ ಎಂ.ಶರಣಗೌಡ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸಾರ್ವಜನಿಕ ವಲಯದ ಎಲ್‌ಐಸಿಯನ್ನು ದುರ್ಬಲಗೊಳಿಸುವ ಹುನ್ನಾರವನ್ನು ಸರ್ಕಾರ ಮಾಡುತ್ತಿದೆ. ಎಲ್‌ಐಸಿ ಕಂತುಗಳ ಮೇಲೆ ವಿಧಿಸುವ ಜಿಎಸ್‌ಟಿ ಅವೈಜ್ಞಾನಿಕವಾಗಿದ್ದರೂ ಹಿಂಪಡೆಯುತ್ತಿಲ್ಲ. ಅನಿವಾರ್ಯವಲ್ಲದ ಐಪಿಒ ಅನ್ನು ಕಳೆದ ವರ್ಷ ಜಾರಿಗೊಳಿಸಿ ಸಂಸ್ಥೆಯ ಹೆಸರು ಹಾಳು ಮಾಡಲು ಸರ್ಕಾರ ಹೊರಟಿದೆ. ಇದನ್ನು ಸಮರ್ಥವಾಗಿ ಎದುರಿಸಲು ಐಕ್ಯತೆಯಿಂದ ಹೋರಾಟ ನಡೆಸುವ ಅನಿವಾರ್ಯತೆ ಇದೆ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಂ.ರವಿ, ಕ್ಲಾಸ್-1 ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಗುರುರಾಜ, ಅಭಿವೃದ್ಧಿ ಅಧಿಕಾರಿಗಳ ಸಂಘದ ಪ್ರತಿನಿಧಿಗಳಾದ ಡಿ.ಬಿ.ಕಟ್ಟಿಮನಿ, ಪಿ.ಕೃಷ್ಣಾರೆಡ್ಡಿ ಮಾತನಾಡಿದರು. ಸಂಘದ ಪದಾಧಿಕಾರಿಗಳಾದ ಕೆ.ವೀರೇಶ, ರಘೋತ್ತಮರಾವ್, ಲಿಂಗರಾಜ, ಸಂತೋಷಕುಮಾರ, ಶ್ರೀನಿವಾಸ ಯಾದವ, ತಿಮ್ಮಾರೆಡ್ಡಿ, ಭಾರತಿ, ಮಹಾಂತಗೌಡ, ನಾಗರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net