ಕನಕದಾಸ ಜಯಂತಿ ಸರಳ ಆಚರಣೆ

ಯಲಬುರ್ಗಾ ತಹಸಿಲ್ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಮಾತನಾಡಿದರು. ತಾಲೂಕು ಹಾಲುಮತ ಸಮಾಜದ ಅಧ್ಯಕ್ಷ ವೀರನಗೌಡ ಬಳೋಟಗಿ, ಸಮಾಜದ ಹಿರಿಯ ಮುಖಂಡ ಕೆರಿಬಸಪ್ಪ ನಿಡಗುಂದಿ, ಶಿರಸ್ತೇದಾರ್ ದೇವರಡ್ಡಿ ಇತರರಿದ್ದರು.

Published on

ಯಲಬುರ್ಗಾ: ಭಕ್ತ ಶ್ರೇಷ್ಠ ಕನಕದಾಸರ ಜಯಂತಿಯನ್ನು ನ.8ರಂದು ಸಮಾಜದವರೊಂದಿಗೆ ತಾಲೂಕಾಡಳಿತದಿಂದ ಸರಳವಾಗಿ ಆಚರಿಸಲಾಗುವುದು ಎಂದು ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಹೇಳಿದರು.

ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳು ಬೆಳಗ್ಗೆ ಕಚೇರಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಬೇಕು. ಬಳಿಕ ಬಸ್ ನಿಲ್ದಾಣದ ಹತ್ತಿರ ಕನಕದಾಸರ ಪುತ್ಥಳಿಗೆ ಪೂಜೆ ಸಲ್ಲಿಲಾಗುವುದು. ತಾಲೂಕಿನ ಎಲ್ಲ ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಕನಕದಾಸರ ಜಯಂತಿ ಆಚರಿಸಬೇಕು. ಎಲ್ಲ ಸಮಾಜದ ಮುಖಂಡರು, ಸಾರ್ವಜನಿಕರು, ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದರು.

ತಾಲೂಕು ಹಾಲುಮತ ಸಮಾಜದ ಅಧ್ಯಕ್ಷ ವೀರನಗೌಡ ಬಳೋಟಗಿ, ಸಮಾಜದ ಹಿರಿಯ ಮುಖಂಡ ಕೆರಿಬಸಪ್ಪ ನಿಡಗುಂದಿ, ಶಿರಸ್ತೇದಾರ್ ದೇವರಡ್ಡಿ, ವಿವಿಧ ಇಲಾಖೆ ಅಧಿಕಾರಿಗಳಾದ ಶಶಿಧರ ಸಕ್ರಿ, ಸಂಜಯ ಚಿತ್ರಗಾರ, ಸಿಬ್ಬಂದಿ ಸಾವಿತ್ರಿ ಬಿನ್ನಾಳ, ಬಸವರಾಜ, ಹನುಮಂತಗೌಡ ಪಾಟೀಲ್, ಪ್ರಮುಖರಾದ ಗದ್ದೆಪ್ಪ ಚಿಲವಾಡಿ, ರೇವಣೆಪ್ಪ ಹಿರೇಕುರಬರ, ಯಲ್ಲಪ್ಪ ಹೊಸ್ಮನಿ, ಹನುಮಂತಪ್ಪ ಹನುಮಾಪುರ, ಶಿವು ರಾಜೂರು, ಬಾಲಚಂದ್ರ ಸಾಲಬಾವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net