ಕನಕದಾಸ ಜಯಂತಿ ಆಚರಣೆಗೆ ಸಿದ್ಧತೆ ಕೈಗೊಳ್ಳಬೇಕು

28Savadatti1
Published on

ಸವದತ್ತಿ: ಸಂತ ಕನಕದಾಸ ಜಯಂತಿ ಅರ್ಥಪೂರ್ಣವಾಗಿ ಆಚರಿಸಲು ಎಲ್ಲ ಇಲಾಖೆ ಅಧಿಕಾರಿಗಳು ಅಗತ್ಯ ಸಿದ್ಧತೆ ಕೈಗೊಳ್ಳಬೇಕು. ಜತೆಗೆ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಸೂಚಿಸಿದರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂತ ಕನಕದಾಸ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸಾರ್ವಜನಿಕರ ಅನುಕೂಲಕ್ಕಾಗಿ ಗುರುಭವನದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಿ ಪ್ರಗತಿಪರ ರೆತರು, ಸಾಧಕರು, ಯೋಧರು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಕನಕದಾಸರ ಜೀವನ ಚರಿತ್ರೆ ಕುರಿತಾದ ಉಪನ್ಯಾಸ ನೀಡಲಾಗುವುದು. ಡಿಜೆ ಬದಲು ಉತ್ತರ ಕರ್ನಾಟಕ ದ ಸೊಬಗು ಸಾರುವ ಡೊಳ್ಳು ಕುಣಿತ, ಕರಡಿ ಮಜಲು ಆಯೋಜಿಸಿ ಜಯಂತಿ ಯಶಸ್ಸಿಗೆ ಶ್ರಮಿಸಬೇಕೆಂದರು.

ತಹಸೀಲ್ದಾರ್​ ಮಲ್ಲಿಕಾರ್ಜುನ ಹೆಗ್ಗನ್ನವರ ಮಾತನಾಡಿ, ತಾಲೂಕಿನ ಎಲ್ಲ ಸರ್ಕಾರಿ ಕಚೇರಿ ಹಾಗೂ ಶಾಲಾ&ಕಾಲೇಜುಗಳಲ್ಲಿ ಕನಕದಾಸರ ಜಯಂತಿ ಆಚರಿಸಬೇಕು. ಶಾಲಾ&ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಿ ಪ್ರಥಮ, ದ್ವೀತಿಯ ಹಾಗೂ ತತೀಯ ಸ್ಥಾನ ಪಡೆದ ಮಕ್ಕಳಿಗೆ ಬಹುಮಾನ ವಿತರಿಸಲಾಗುವುದು ಎಂದರು.

ಶಾಸಕರು ಕನಕ ಭವನ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಜಯಂತಿ ನಂತರ ಸಮುದಾಯ ಹಾಗೂ ಅಧಿಕಾರಿಗಳೊಟ್ಟಿಗೆ ಸಭೆ ನಡೆಸೋಣ ಎಂದರು. ಕುರುಬ ಸಮಾಜದ ತಾಲೂಕಾಧ್ಯ ಜಿ.ಜಿ. ಕಣವಿ ಮಾತನಾಡಿ, ಕನಕದಾಸರ ಭಾವಚಿತ್ರ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಪಾಲ್ಗೊಳ್ಳಬೇಕು ಎಂದರು. ಬೆಮುಲ್​ ನಿರ್ದೇಶಕ ಶಂಕರ ಇಟ್ನಾಳ ಮಾತನಾಡಿ, ಈ ಬಾರಿ ಯರಗಟ್ಟಿ ತಾಲೂಕಿನಲ್ಲಿ ಅದ್ದೂರಿಯಾಗಿ ಕನಕದಾಸ ಜಯಂತಿ ಆಚರಿಸಲಾಗುವುದು. ಸಮುದಾಯದವರು ಸ್ವಯಂಪ್ರೇರಣೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ತಾಪಂ ಕಾರ್ಯನಿರ್ವಹಣಾಧಿಕಾರಿ ಆನಂದ ಬಡಕುಂದ್ರಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ.ಖಾಜಿ, ಮುಖ್ಯಾಧಿಕಾರಿ ಸಂಗನಬಸಯ್ಯ, ಪಿಎಸ್​ಐ ಕೆ.ಎಂ.ಬನ್ನೂರ, ಚಂದ್ರು ಶಾಮರಾಯನವರ, ಮಂಜುನಾಥ ಪಾಚಂಗಿ, ನೀಲಪ್ಪ ಅಣ್ಣಿಗೇರಿ, ಸಮಾಜ ಕಲ್ಯಾಣ ಇಲಾಖಾಧಿಕಾರಿ ಆರ್​. ಆರ್​.ಕುಲಕರ್ಣಿ, ಎಪಿಎಂ ಸಿ ಅಧ್ಯ ಚಂದ್ರಶೇಖರ ಜಂಬ್ರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net