

ಬದಿಯಡ್ಕ: ಜಾರ್ಖಂಡ್‌ನ ರಾಂಚಿಯ ಖೇಲ್‌ಗಾಂವ್‌ನಲ್ಲಿ ಜರುಗಿದ 68ನೇ ಅಖಿಲ ಭಾರತ ಕರ್ತವ್ಯ ಕೂಟದ ಕಂಪ್ಯೂಟರ್ ಅವಾರ್ನೆಸ್ ಸ್ಪರ್ಧೆಯಲ್ಲಿ ಕರ್ನಾಟಕ ಪ್ರತಿನಿಧಿಸಿದ ಸಿವಿಲ್ ಹೆಡ್‌ಕಾನ್‌ಸ್ಟೆಬಲ್ ಗುರುರಾಜ್ ಜಾಧವ್ ಬೆಳ್ಳಿ ಪದಕ ಗೆದ್ದಿದ್ದಾರೆ. ಒಟ್ಟು 24 ರಾಜ್ಯಗಳ 68 ಸ್ಪರ್ಧಾಳುಗಳು ಭಾಗವಹಿಸಿದ್ದರು.
ಗುರುರಾಜ್ ಜಾಧವ್ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಿಸ್ಟಂ ಅಡ್ಮಿನಿಸ್ಟ್ರೇಟರ್ ಆಗಿದ್ದರು. ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಠಾಣಾ ಬರಹಗಾರರಾಗಿ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಸಿಐಡಿ ಕಚೇರಿಯಲ್ಲಿ ಅಡ್ಮಿನಿಸ್ಟ್ರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ರಾಜ್ಯಮಟ್ಟದಲ್ಲಿ 4 ಚಿನ್ನದ ಪದಕ ಮತ್ತು ಅಖಿಲ ಭಾರತ ಕರ್ತವ್ಯಕೂಟದಲ್ಲಿ ಮೂರು ಪದಕ ಪಡೆದಿದ್ದಾರೆ. ಮುಂಡೋಡು ನಿವಾಸಿ ಧರ್ಮಪಾಲ ಜಾಧವ್ ಇವರ ಪುತ್ರ, ಮಂಗಳೂರು ಯುನಿವರ್ಸಿಟಿ ಕಾಲೇಜು ಮತ್ತು ಪೆರಡಾಲ ನವಜೀವನ ಪ್ರೌಢಶಾಲೆ ಹಳೇ ವಿದ್ಯಾರ್ಥಿಯಾಗಿದ್ದಾರೆ.