ಪೊಳ್ಳು ಭರವಸೆಯ ಬಜೆಟ್: ಉಮ್ಮರ್ ಬೋರ್ಕಳ ಆರೋಪ

Published on

ಕಾಸರಗೋಡು: ಕೇರಳದ ಎಡರಂಗ ಸರ್ಕಾರದ ಬಜೆಟ್ ಪೊಳ್ಳು ಭರವಸೆಯಿಂದ ಕೂಡಿದ ಹಾಗೂ ಯಾವುದೇ ಜನೋಪಕಾರಿ ಸಲಹೆಗಳಿಲ್ಲದ ಕರಪತ್ರವಾಗಿದೆ ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಉಮ್ಮರ್ ಬೋರ್ಕಳ ಹೇಳಿದ್ದಾರೆ.

ಕೇರಳ ಸರ್ಕಾರದ ಜನವಿರೋಧಿ ಬಜೆಟ್ ಹಾಗೂ ಭೂ ತೆರಿಗೆ ಹೆಚ್ಚಳ ಪ್ರತಿಭಟಿಸಿ ವರ್ಕಾಡಿ ಗ್ರಾಮ ಕಚೇರಿ ಎದುರು ನಡೆದ ಧರಣಿ ಉದ್ಘಾಟಿಸಿ ಮಾತನಾಡಿದರು.

ಪುರುಷೋತ್ತಮ ಅರಿಬೈಲ್ ಅಧ್ಯಕ್ಷತೆ ವಹಿಸಿದ್ದರು. ಮುಹಮ್ಮದ್ ಮಜಾಲ್, ಖಲೀಲ್ ಬಜಾಲ್, ಗಣೇಶ್ ಪಾವೂರು, ಎಸ್ ಅಬ್ದುಲ್ ಖಾದರ್ ಹಾಜಿ, ಶಾಂತಾ ಆರ್.ನಾಯ್ಕ, ಮೂಸಾ ಡಿ.ಕೆ, ವಸಂತರಾಜ್ ಶೆಟ್ಟಿ, ರಾಬಿಯಾ, ಶೀನ ಕೆದುಂಬಾಡಿ, ವಿನೋದ್ ಪಾವೂರು, ಚಂದ್ರಶೇಖರ್ ಅರಿಬೈಲ್, ಬಾಸಿತ್ ತಲೆಕ್ಕಿ, ಅಶ್ರಫ್ ಕೆ.ಕೆ., ಹಮೀದ್ ಕಣಿಯೂರು, ಸಲೀಂ ಒಡಿಪ್ರಕೋಡಿ, ಖಾಲಿದ್ ಆನೆಕಲ್ಲು, ಶರೀಫ್ ಪಾಲೆಂಗ್ರಿ, ಮೊದಲಾದವರು ಉಪಸ್ಥಿತರಿದ್ದರು. ಎ.ಎಂ ಉಮ್ಮರ್ ಕುಂಞಿ ಸ್ವಾಗತಿಸಿದರು. ಸದಾಶಿವ ಕೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net