ಆಲೂರಿನಲ್ಲಿ ಮೌನ ಪ್ರತಿಭಟನೆ

ಆಲೂರಿನಲ್ಲಿ ಮೌನ ಪ್ರತಿಭಟನೆ
Published on

ಆಲೂರು: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷ ಹಾಗೂ ಹಿಂದುಪರ ಸಂಘಟನೆಗಳು ಮೌನ ಪ್ರತಿಭಟನೆ ನಡೆಸಿದರು.

ಆಲೂರು ಪೊಲೀಸ್ ಠಾಣೆ ಮುಂಭಾಗ ಮಾನವ ಸರಪಳಿ ನಿರ್ಮಿಸಿ ತನ್ನ ತಾಯ್ನೇಲ ಬಿಟ್ಟು ಬೇರೆಲ್ಲಿ ಹೋಗಬೇಕು, ವಿಶ್ವ ಸಂಸ್ಥೆ ಮಧ್ಯ ಪ್ರವೇಶಿಸಿ ಬಾಂಗ್ಲಾ ದೇಶದಲ್ಲಿರುವ ಹಿಂದುಗಳ ರಕ್ಷಣೆಮಾಡಬೇಕು ಸೇರಿದಂತೆ ವಿವಿಧ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.

ನಂತರ ಮಾತನಾಡಿದ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷೆ ಉಮಾ ರವಿಪ್ರಕಾಶ್, ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಹೆಚ್ಚಾಗಿರುವುದು ಖಂಡನೀಯ, ಧರ್ಮ ಹಾಗೂ ಜಾತಿ ಹೆಸರಿನಲ್ಲಿ ಪೈಶಾಚಿಕ ಕೃತ್ಯ ನಡೆಸುತ್ತಿರುವುದು ತಲೆತಗ್ಗಿಸುವಂತಹ ಕೆಲಸವಾಗಿದೆ ಎಂದರು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಕೆ.ಎಸ್. ಮಂಜೇಗೌಡ ಮಾತನಾಡಿ, ಬಾಂಗ್ಲಾದೇಶದಲ್ಲಿ ಹಿಂದುಗಳನ್ನೇ ಗುರಿಯಾಗಿಸಿಕೊಂಡು, ಕ್ರೌರ್ಯ ನಡೆಸುತ್ತಿರುವುದು ಬೇಸರದ ಸಂಗತಿ ವಿಶ್ವ ಸಂಸ್ಥೆ ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತರಬೇಕು ಎಂದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪೂವಯ್ಯ, ಕದಾಳು ಲೊಕೇಶ್, ರಮೇಶ್ ಹಳೆ ಆಲೂರು, ಹೇಮಂತ್, ವಿಕಾಸ್, ನವೀನ್ ದಡದಹಳ್ಳಿ ಕೃಷ್ಣಮೂರ್ತಿ, ಅಬ್ಬನ, ಧ್ರುವ, ಭರಣ್, ಮಲ್ಲೇಶ್ ಹೊಸಪುರ, ಪ.ಪಂ ಸದಸ್ಯ ಹರೀಶ್, ಬಾಲಲೋಚನಾ, ರುದ್ರೇಗೌಡ, ಕೇಶವಮೂರ್ತಿ, ರವಿ, ಮಲ್ಲಿಕಾರ್ಜುನ್, ಯೊಗೇಶ್, ನಂದೀಶ್ ಹೊಸೂರು, ಜಗದೀಶ್ ಕಣಗಾಲು, ಕೃಷ್ಣೇಗೌಡ ಮಣಿಪುರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net