ಬ್ರಹ್ಮರಕೂಟ್ಲು ಟೋಲ್‌ಗೇಟ್ ತೆರವಿಗೆ ಆಗ್ರಹ : ಬೆಳ್ತಂಗಡಿಯಲ್ಲಿ ಸಹಿ ಸಂಗ್ರಹ ಅಭಿಯಾನ

New Project (10)
Published on

ಬೆಳ್ತಂಗಡಿ: ಬ್ರಹ್ಮರಕೂಟ್ಲು ಟೋಲ್‌ಗೇಟ್ ತೆರವುಗೊಳಿಸಲು ಒತ್ತಾಯಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ಹೋರಾಟದ ಭಾಗವಾಗಿ ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರಾಧ್ಯಕ್ಷ ಅಕ್ಬರ್ ಬೆಳ್ತಂಗಡಿ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕಿನಾದ್ಯಂತ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.

ಬೆಳ್ತಂಗಡಿ ಮೂರು ಮಾರ್ಗ ಬಳಿ ಸಹಿ ಸಂಗ್ರಹ ಮಾಡಲಾಯಿತು. ವಾಹನ ಚಾಲಕರು, ಸಾರ್ವಜನಿಕರು ಸಹಿ ಹಾಕುವ ಮೂಲಕ ಹೋರಾಟಕ್ಕೆ ನೈತಿಕ ಬೆಂಬಲ ನೀಡಿದರು. ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಮದ್ದಡ್ಕ, ಉಜಿರೆ ಟಿ.ಬಿ ಕ್ರಾಸ್, ಮಡಂತ್ಯಾರಿನಲ್ಲಿ ಸಾರ್ವಜನಿಕರ ಸಹಿ ಸಂಗ್ರಹ ಮಾಡಲಾಯಿತು.

ವಕೀಲ ಪ್ರಶಾಂತ್, ಪತ್ರಕರ್ತ ಸಂಘದ ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಮಾನವ ಬಂಧುತ್ವ ವೇದಿಕೆ ಜಿಲ್ಲಾಧ್ಯಕ್ಷ ಚನ್ನಕೇಶವ, ಜಿಲ್ಲಾ ಕಾರ್ಯದರ್ಶಿ ನವಾಝ್ ಕಟ್ಟೆ, ಜಿಲ್ಲಾ ಸಮಿತಿ ಸದಸ್ಯ ಹನೀಫ್ ಪುಂಜಾಲಕಟ್ಟೆ, ಕ್ಷೇತ್ರ ಕಾರ್ಯದರ್ಶಿ ಅಶ್ಫಾಕ್ ಪುಂಜಾಲಕಟ್ಟೆ, ನಿಸಾರ್ ಕುದ್ರಡ್ಕ, ರಶೀದ್ ಬೆಳ್ತಂಗಡಿ, ಸ್ವಾಲಿ ಮದ್ದಡ್ಕ, ಅಶ್ರಫ್ ಕಟ್ಟೆ, ಸಹಲ್ ನಿರ್ಸಾಲ್, ಉಜಿರೆ ಬ್ಲಾಕ್ ಅಧ್ಯಕ್ಷ ಮಹಮ್ಮದ್ ಆಲಿ, ಫಝಲ್ ಉಜಿರೆ, ಮರ್ಷಾ ಉಜಿರೆ, ಸಾದಿಕ್ ಲಾಯಿಲ, ರಿಯಾಝ್ ಲಾಯಿಲ, ವೇಣೂರು ಬ್ಲಾಕ್ ಅಧ್ಯಕ್ಷ ಅಶ್ರಫ್ ಬದ್ಯಾರು, ಅಸ್ಲಾಂ ಮದ್ದಡ್ಕ, ಶಬೀರ್, ಕಣಿಯೂರು ಬ್ಲಾಕ್ ಅಧ್ಯಕ್ಷ ಮುಸ್ತಾಫ ಬಂಗೇರಕಟ್ಟೆ, ಹನೀಫ್ ಟಿ.ಎಸ್., ರೌಫ್ ಪುಂಜಾಲಕಟ್ಟೆ, ರಝಕ್ ಬಿ.ಎಂ., ರಫೀಕ್ ಕನ್ನಡಿಕಟ್ಟೆ, ಇಸ್ಮಾಯಿಲ್ ಬೆಳ್ತಂಗಡಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net