ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರೆ ಸಮಾಲೋಚನಾ ಸಭೆ

Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಮಾ.1ರಿಂದ ಮಾ.5ರ ತನಕ ನಡೆಯುವ ಜಾತ್ರಾ ಮಹೋತ್ಸವವನ್ನು ಯಶಸ್ಸುಗೊಳಿಸುವ ಬಗ್ಗೆ ಬೆಳ್ತಂಗಡಿ ತಾಲೂಕಿನ ಬಾರ್ಯ ತೆಕ್ಕಾರು ಪುತ್ತಿಲ ಗ್ರಾಮದ ಶ್ರೀ ಕ್ಷೇತ್ರ ಗೆಜ್ಜೆಗಿರಿ ಭಕ್ತರ ಸಮಾಲೋಚನಾ ಸಭೆ ಮುಜ್ಜಾಲೆ ಬಾರ್ಯ ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ನಡೆಯಿತು. ಬೆಳ್ತಂಗಡಿ ಶ್ರೀ ಗುರುನಾರಾಯಣ ಸೇವಾ ಸಂಘ ಅಧ್ಯಕ್ಷ ಜಯವಿಕ್ರಂ ಕಲ್ಲಾಪು ಕ್ಷೇತ್ರದ ಜಾತ್ರೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.

ಜಾತ್ರೋತ್ಸವ ಸಮಿತಿ ಬೆಳ್ತಂಗಡಿ ತಾಲೂಕು ಪ್ರದಾನ ಸಂಚಾಲಕ ನಿತ್ಯಾನಂದ ನಾವರ ಶ್ರೀ ಕ್ಷೇತ್ರದಲ್ಲಿ ನಡೆಯುವ ಮಡಿಲು ಸೇವೆ, ಉತ್ಸವದ ಮಾಹಿತಿ ನೀಡಿದರು. ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ರಾಜಾರಾಮ್, ಗ್ರಾಮ ಸಮಿತಿ ಅಧ್ಯಕ್ಷರಾದ ಶೇಷಪ್ಪ ಸಾಲಿಯನ್ ಬರ್ಯಾ ಗುತ್ತು, ದಿನೇಶ್ ಸುಣ್ಣಾಜೆ, ಬೆಳ್ತಂಗಡಿ ಗುರುನಾರಾಯಣ ಸೇವಾ ಸಂಘ ನಿರ್ದೇಶಕರಾದ ಗುಣಕರ ಅಗ್ನಾಡಿ, ಕೃಷ್ಣ್ಣಪ್ಪ ಪೈಂದಗುತ್ತು, ವಿಶ್ವನಾಥ್ ಸುನ್ನಾಜೆ, ದಿನಕರ್ ಮುಜ್ಜಾಲೆ, ಚಿದಾನಂದ ಪೋಸ್ಟ್‌ಮಾಸ್ಟರ್, ಶ್ರೀಧರ, ಅರುಣಾ ಬಜಕ್ಕಲ, ಪ್ರವೀಣ್ ಬಜಕ್ಕಲ, ಕಿಶೋರ್ ಚಂದ್ರ, ಕರುಣಾಕರ, ಗುಣಕರ ಮುಗ್ಗ, ಧನುಷ್, ಪ್ರವೀಣ್ ಬಂಗೇರ, ಪುನೀತ್, ಜಿತೇಶ್, ಹರೀಶ್ ಪೇಲತ್ತಾಜೆ, ಪ್ರಿತೇಶ್, ಸ್ನೇಹ ಕಿಶೋರ್, ಶ್ವೇತಾ ದಿನೇಶ್, ವಿಮಲಾ ಸುಣ್ಣಜೆ, ಸಂಧ್ಯಾ ಗುಣಕರ್, ಗ್ರಾಪಂ ಅಧ್ಯಕ್ಷರಾದ ಹೇಮಾವತಿ, ಸ್ವಾತಿ, ವೇದಾವತಿ ದಿನಕರ್, ಶ್ರೀ ಕ್ಷೇತ್ರ ಗೆಜ್ಜೆಗಿರಿ ಭಕ್ತರು ಉಪಸ್ಥಿತರಿದ್ದರು.

ಗೆಜ್ಜೆಗಿರಿ ಕಣಿಯೂರು ವಲಯ ಸಂಚಾಲಕ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸೇವಾ ಸಂಘ ನಿರ್ದೇಶಕ ಉಷಾ ಶರತ್ ಸ್ವಾಗತಿಸಿದರು. ಗುರು ನಾರಾಯಣ ಸೇವಾ ಸಂಘ ನಿರ್ದೇಶಕ ಗುಣಕರ ಅಗ್ನಾಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net