

ಕುಂದಾಪುರ: ಹೇರಿಕುದ್ರು ಅಂಡರ್‌ಪಾಸ್ ತಿರುವಿನಲ್ಲಿ ಮುನ್ನೆಚ್ಚರಿಕೆಗಾಗಿ ಹೆದ್ದಾರಿ ಪ್ರಾಧಿಕಾರದ ಸೂಚನೆಯಂತೆ ಐಆರ್‌ಬಿಯವರು ಸಿಗ್ನಲ್ ಲೈಟ್‌ಗಳನ್ನು ಹಾಕಿದ್ದಾರೆ. ಅಂಡರ್‌ಪಾಸ್ ಬಳಿಯ ಅಪಾಯಕಾರಿ ತಿರುವಿನಲ್ಲಿ ಸೂಕ್ತ ಸುರಕ್ಷತಾ ಕ್ರಮಗಳಿಲ್ಲದೆ ಅವಘಡಗಳು ಹೆಚ್ಚುತ್ತಿದ್ದವು. ಬೈಂದೂರು - ಕುಂದಾಪುರ ರಾ.ಹೆ. 66ರ ಹೇರಿಕುದ್ರು ಅಂಡರ್‌ಪಾಸ್ ಕೊನೆಯಾಗುವಲ್ಲಿ ಸಂಗಮ್ ಸೇತುವೆಗಿಂತ ತುಸು ಹಿಂದೆ ಅಪಾಯಕಾರಿ ತಿರುವಿದೆ. ವೇಗವಾಗಿ ಬರುವ ವಾಹನ ಚಾಲಕರಿಗೆ ಇದರ ಅರಿವು ಇದರೆ ನಿಯಂತ್ರಣ ತಪ್ಪಿ ಅವಘಡಗಳಾತ್ತಿದ್ದವು. ಈ ಬಗ್ಗೆ ಹೇರಿಕುದ್ರು ಭಾಗದ ಜನರು ಅನೇಕ ಬಾರಿ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ, ಕಾಮಗಾರಿ ನಿರ್ವಹಿಸುತ್ತಿರುವ ಐಆರ್‌ಬಿಯವರ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ಸಿಕ್ಕರಲಿಲ್ಲ. ಕಳೆದ ಎರಡು ದಿನಗಳ ಹಿಂದೆ ಇಲ್ಲಿ ಕಾರು ಪಲ್ಟಿಯಾದ ಬಳಿಕ ಎಚ್ಚೆತ್ತುಕೊಂಡಿರುವ ಗುತ್ತಿಗೆ ಸಂಸ್ಥೆ ಐಆರ್‌ಪಿ, ಹೆದ್ದಾರಿಯಲ್ಲಿ ಮುಂದಕ್ಕೆ ಅಪಾಯಕಾರಿ ತಿರುವ ಇರುವುದಾಗಿ ಎಚ್ಚರಿಸುವ ಸಿಗ್ನಲ್ ಲೈಟ್‌ಗಳನ್ನು ಅಳವಡಿಸಿದ್ದಾರೆ. ರಸ್ತೆಯನ್ನೇ ನೇರ ಮಾಡಿ ತಿರುವು ಸರಿಪಡಿಸುವ ಕಾರ್ಯ ಮಾಡಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಹೇರಿಕುದ್ರುವಿನ ಅಂಡರ್‌ಪಾಸ್ ಬಳಿ ಅಪಾಯಕಾರಿ ತಿರುವಿನಲ್ಲಿ ಆಗುತ್ತಿರುವ ಅವಘಡಗಳ ಬಗ್ಗೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಾಗಿ ವಿಜಯವಾಣಿ ಜು.31ರಂದು ವಿಶೇಷ ವರದಿ ಪ್ರಕಟಿಸಿ, ಗಮನಸೆಳೆದಿತ್ತು.
ಹೇರಿಕುದ್ರುವಿನ ಹೆದ್ದಾರಿಯಲ್ಲಿ ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಈ ಹಿಂದೆ ಅನೇಕ ಬಾರಿ ಜಿಲ್ಲಾ ಉಸ್ತುವಾರಿ ಸಚಿವರು, ಪರಿಷತ್ ಸದಸ್ಯರಿಗೆ ಮನವಿ ಸಲ್ಲಿಸಲಾಗಿತ್ತು. ಅವರ ಮೂಲಕ ಹೆದ್ದಾರಿ ಪ್ರಾಧಿಕಾರಕ್ಕೆ, ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು. ಗುತ್ತಿಗೆ ಕಂಪೆನಿಯವರು, ಪ್ರಾಜೆಕ್ಟ್ ಡೈರೆಕ್ಟರ್ ಈ ಬಗ್ಗೆ ಈವರೆಗೆ ಯಾವುದೇ ಕ್ರಮ ವಹಿಸಿರಲಿಲ್ಲ. ಇದೀಗ ಸೂಚನಾ ಫಲಕಸ ಸಿಗ್ನಲ್ ಲೈಟ್ ಅಳವಡಿಸಿದ್ದಾರೆ. ಅಭಿಜಿತ್ ಪೂಜಾರಿ ಹೇರಿಕುದ್ರು, ಸ್ಥಳೀಯರು