7, 8 ರಂದು ಸಿದ್ಧಿವಿನಾಯಕ ದೇವಸ್ಥಾನದ ವಾರ್ಷಿಕೋತ್ಸವ

01mdk11
ಕುಶಾಲನಗರದ ಬಲಮುರಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ
Published on

ಕುಶಾಲನಗರ: ಕುಶಾಲನಗರದ ನೆಹರೂ ಬಡಾವಣೆಯಲ್ಲಿ ಇರುವ ಬಲಮುರಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ 27ನೇ ವಾರ್ಷಿಕೋತ್ಸವ ಮತ್ತು 25ನೇ ವರ್ಷದ ಉತ್ಸವಮೂರ್ತಿಯ ಮೆರವಣಿಗೆ ಕಾರ್ಯಕ್ರಮಗಳು ಫೆ.7 ಮತ್ತು 8ರಂದು ನಡೆಯಲಿದೆ.

ಫೆ.7ರಂದು ಕಳಸ ಸ್ಥಾಪನೆ, ಶುದ್ಧಿ ಪುಣ್ಯಹ, ಗಣಪತಿ ಪೂಜೆ, ನವಗ್ರಹ ಪೂಜೆ, ಹೋಮ, ದೇವಾಲಯ ಒಕ್ಕೂಟ ಸಮಿತಿಯ ಸಂಕಲ್ಪ (ಬೆಳಗ್ಗೆ 9.30) ಮಹಾ ಮಂಗಳಾರತಿ ಪೂಜಾ ಕಾರ್ಯಗಳು ನಡೆಯಲಿವೆ. ಫೆ.8ರಂದು ಏಕಾದಶಿ ತಿಥಿ, ಬಲಮುರಿ ಸಿದ್ಧಿವಿನಾಯಕ ಸ್ವಾಮಿಯ ಪೂಜಾ ಮಹೋತ್ಸವ ಬೆಳಗ್ಗೆ 9 ಗಂಟೆಯಿಂದ ಗಣಪತಿ ಹೋಮ ಮತ್ತು ಸ್ವಾಮಿಗೆ ಪಂಚಾಮೃತ ಅಭಿಷೇಕ ಮಧ್ಯಾಹ್ನ 12.30 ಗಂಟೆಗೆ ಮಹಾ ಮಂಗಳಾರತಿ ಅನ್ನ ಪ್ರಸಾದ ವಿನಿಯೋಗ ಇರುತ್ತದೆ. ಅದೇ ದಿನ ಸಂಜೆ 7 ಗಂಟೆಯಿಂದ ಮಂಗಳವಾದ್ಯಗಳೊಂದಿಗೆ ಉತ್ಸವ ಮೂರ್ತಿಯ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ರೇಣುಕುಮಾರ್, ಕಾರ್ಯದರ್ಶಿ ಅರುಣ್ ಹಾಗೂ ಖಜಾಂಚಿ ಬಿ.ಸಿ.ಆನಂದ್ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net