ಕೆಆರ್‌ಎಸ್‌ಗೆ ಸಿದ್ಧಗಂಗಾ ಶ್ರೀ ಭೇಟಿ

31-08-24--krs1 (1)
ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಕೆ.ಆರ್.ಸಾಗರ ಅಣೆಕಟ್ಟೆ ಹಾಗೂ ಬೃಂದಾವನಕ್ಕೆ ಭೇಟಿ ನೀಡಿ ವೀಕ್ಷಿಸಿದರು.
Published on

ಕೆ.ಆರ್.ಸಾಗರ: ಕೃಷ್ಣರಾಜಸಾಗರ ಅಣೆಕಟ್ಟೆ ಭರ್ತಿಯಾಗಿ ಹೊರ ಹರಿವು ಹೆಚ್ಚಾಗಿದ್ದು, ಶುಕ್ರವಾರ ಸಂಜೆ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಭೇಟಿ ವೀಕ್ಷಣೆ ಮಾಡಿದರು.

ನಂತರ ಕಾವೇರಿ ಪ್ರತಿಮೆಗೆ ನಮಿಸಿ ಬೃಂದಾವನ ಉದ್ಯಾನವನ ನೋಡಿ ಸಂತಸಪಟ್ಟರು. ರಾಜ್ಯದ ಜೀವನಾಡಿ ಕೆಆರ್‌ಎಸ್ ಈ ಬಾರಿ ತುಂಬಿರುವುದು ಎಲ್ಲರಿಗೂ ಸಂತಸತಂದಿದೆ. ರೈತರು ಸೇರಿದಂತೆ ಎಲ್ಲರೂ ನೆಮ್ಮದಿಯಿಂದ ಇರಲು ವರುಣ ಕೃಪೆ ತೋರಿದ್ದು ರಾಜ್ಯ ಸಮೃದ್ಧಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಬೇಬಿ ಬೆಟ್ಟದ ಶ್ರೀ ಶಿವಬಸವ ಸ್ವಾಮೀಜಿ, ಇತರ ಸ್ವಾಮೀಜಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net